ಉಪ ಪ್ರಾಂತೀಯ ಜಿಲ್ಲೆ ಶೆಂಜೆನ್‌ನಲ್ಲಿ ಬಾಲಿವುಡ್ ತಾರೆ ಐಶ್ವರ್ಯ ರೈಗೆ ಯುವ ಅಭಿಮಾನಿಗಳು ಬೇಕಾದಷ್ಟು ಮಂದಿ ಇದ್ದಾರೆ. ಹಾಕಿಯಾಂಗ್ ರಸ್ತೆಯ ಮೆಜೆಸ್ಟಿಕ್ ಹೋಟೆಲ್ ಪೆವಿಲಿಯನ್‌ನಲ್ಲಿ ಐಶ್ವರ್ಯಳ ಚಿತ್ರವಿರುವ ದೊಡ್ಡ ಫಲಕ ವಿಜೃಂಭಿಸುತ್ತಿದೆ.
"ನಾನು ಈ ರಸ್ತೆಯಲ್ಲಿ ದಿನವೂ ಹಾದುಹೋಗುತ್ತಿದ್ದು ಆಕೆಯ ಚಿತ್ರದತ್ತ ಕಣ್ಣುಹಾಯಿಸದೇ ಹೋಗುವುದಿಲ್ಲ" ಎಂದು ಜಾಹೀರಾತು ಕಂಪನಿಯ ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಜು ಶಾನ್ ಉದ್ಗರಿಸುತ್ತಾರೆ.
ಎಲ್ ಓರಿಯಲ್ ಸೌಂದರ್ಯವರ್ಧಕ ಉತ್ಪನ್ನಗಳಿಗೆ ಐಶ್ ಬ್ರಾಂಡ್ ಅಂಬಾಸಿಡರ್. ಅವಳು ಅಭಿನಯಿಸಿದ ಅನೇಕ ಸಿನೆಮಾಗಳನ್ನು ನೋಡಿದ್ದು, ಒಳ್ಳೆಯ ನಟಿ ಎಂದೂ ಅವರು ಶಹಭಾಶ್‌ಗಿರಿ ಕೊಡುತ್ತಾರೆ.
ಜೆಂಗ್ ಫ್ಯಾಂಗನ್ ಐಶ್ವರ್ಯಳ ಸೌಂದರ್ಯದ ಜತೆ ನಟನಾ ಪ್ರತಿಭೆಯನ್ನೂ ಹೊಗಳುತ್ತಾರೆ. ಅವಳು ಪ್ರತಿಭಾವಂತೆ. ಸ್ಥಳೀಯ ಕೇಬಲ್ ಜಾಲದಲ್ಲಿ ಆಕೆಯ ಕೆಲವು ಚಿತ್ರಗಳನ್ನು ವೀಕ್ಷಿಸಿದ್ದೇನೆ ಎಂದು ಐಟಿ ಸಂಸ್ಥೆಯ ಸಂಪರ್ಕ ಮ್ಯಾನೇಜರ್ ಹೇಳುತ್ತಾರೆ. ಸಿಸಿಟಿವಿ ಮುಂತಾದ ಸ್ಥಳೀಯ ಚಾನೆಲ್‌ಗಳು ಚೀನದ ಉಪನಾಮಗಳೊಂದಿಗೆ ಭಾರತದ ಚಿತ್ರಗಳನ್ನು ತೋರಿಸುತ್ತಿದೆ.
|