ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಆಸ್ಟ್ರೇಲಿಯದಲ್ಲಿ "ಗಾಂಧಿ ಮೈ ಫಾದರ್"
ಆಸ್ಟ್ರೇಲಿಯದಲ್ಲಿ 5ನೇ ಆಸ್ಟ್ರೇಲಿಯ-ಭಾರತ ಚಲನಚಿತ್ರೋತ್ಸವ ಫಿರೋಜ್‌ಖಾನ್ ಅವರ "ಗಾಂಧಿ ಮೈ ಫಾದರ್" ಚಿತ್ರದೊಂದಿಗೆ ಸಿಡ್ನಿಯಲ್ಲಿ ಆರಂಭವಾಗಲಿದೆ. ಅ.17ರಿಂದ ಆರಂಭವಾಗುವ ಈ ಚಿತ್ರೋತ್ಸವ ಭಾರತದ ಅತ್ಯುತ್ತಮ ಚಿತ್ರಗಳನ್ನು ಪ್ರದರ್ಶಿಸಲಿದೆ ಮತ್ತು ಭಾರತೀಯ ಚಿತ್ರೋದ್ಯಮ ಮತ್ತು ಫ್ಯಾಷನ್ ಉದ್ಯಮದ ಪ್ರಮುಖ ವ್ಯಕ್ತಿಗಳಿಗೆ ಆತಿಥ್ಯ ನೀಡಲಿದೆ.

ಬಾಲಿವುಡ್ ನಟರಾದ ಅಕ್ಷಯ್ ಖನ್ನಾ, ಅನಿಲ್ ಕಪೂರ್ ಮತ್ತು ನಿರ್ದೇಶಕ ಫಿರೋಜ್ ಖಾನ್ ಚಿತ್ರೋತ್ಸವದಲ್ಲಿ ಭಾಗವಹಿಸಲಿದ್ದಾರೆ.10 ದಿನಗಳ ಚಿತ್ರೋತ್ಸವದ ಬಳಿಕ ಅತ್ಯುತ್ತಮ ಚಿತ್ರಕ್ಕೆ ಮತ್ತು ಪ್ರದರ್ಶನಗೊಂಡ ಚಿತ್ರಗಳಲ್ಲಿ ಅತ್ಯುತ್ತಮ ಅಭಿನಯಕ್ಕೆ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಹೇಳಿಕೆ ತಿಳಿಸಿದೆ.

ಆಸ್ಟ್ರೇಲಿಯದ ಸಿಬ್ಬಂದಿ, ನೃತ್ಯಗಾತಿಯರು ಮತ್ತು ನಟರು ಪಾಲ್ಗೊಂಡು ಅಲ್ಲೇ ಚಿತ್ರೀಕರಣ ನಡೆದ ದಿಲ್ ಚಾತಾ ಹೈ, ಚಕ್ ದೆ ಇಂಡಿಯ, ಸಲಾಮ್ ನಮಸ್ತೆ ಮತ್ತು ಹೆ ಬೇಬಿ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಲಿದೆ.

ನಾಲ್ಕು ಚಿತ್ರಗಳ ಜತೆಗೆ ಶೂಟ್ ಔಟ್ ಎಟ್ ಲೋಕಂಡವಾಲಾ ಮತ್ತು ತಾ ರಾ ರಮ್ ಪಮ್ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಚಿತ್ರೋತ್ಸವವು ಪ್ರತಿವರ್ಷ 40,000 ಜನರನ್ನು ಸೆಳೆಯುವುದೆಂದು ನಂಬಲಾಗಿದೆ.
ಮತ್ತಷ್ಟು
ಚೀನದಲ್ಲೂ ಐಶ್ವರ್ಯ ಕ್ರೇಜ್
ಇರಾಕ್ ಪಡೆಗಳ ಸ್ವಾವಲಂಬನೆಗೆ ಇನ್ನೂ ಒಂದು ವರ್ಷ
ಪಾಕ್ ಅಧ್ಯಕ್ಷೀಯ ಚುನಾವಣೆ: ಅಟಾರ್ನಿಗೆ ನೋಟಿಸ್
ಹಿಂಸಾ ಪೀಡಿತ ರಾಷ್ಟ್ರದಲ್ಲಿ ಗಾಂಧಿ ಧ್ವನಿ
ಜಿಹಾದ್ ನೆಪದಲ್ಲಿ ಅಪರಾಧಕ್ಕೆ ಪ್ರಚೋದನೆ: ಉಲೇಮಾ
ಮಾತುಕತೆ ಸಂಪೂರ್ಣ ಸ್ಥಗಿತ: ಭುಟ್ಟೊ