ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಶ್ರೀಲಂಕಾ: 6 ಎಲ್‌ಟಿಟಿಇ ಉಗ್ರರ ಹತ್ಯೆ
ವಾಯವ್ಯ ಮನ್ನಾರ್ ಮತ್ತು ವಾಯುನಿಯ ಗಡಿಗಳಲ್ಲಿ ತಮಿಳು ಬಂಡುಕೋರರು ಮತ್ತು ಸೈನಿಕರ ನಡುವೆ ಬುಧವಾರ ಬೆಳಿಗ್ಗೆ ನಡೆದ ಭೀಕರ ಕದನದಲ್ಲಿ 6 ತಮಿಳು ಬಂಡುಕೋರರು ಮತ್ತು ಮೂವರು ಸೈನಿಕರು ಹತರಾಗಿದ್ದಾರೆ.

ವಾಯುನಿಯ ಮತ್ತು ಮನ್ನಾರ್ ಜಿಲ್ಲೆಗಳ ಗಡಿಗಳಲ್ಲಿರುವ ವಿಲಾತಿಕುಲಂ, ಪೆರಿಯಾಂತಪಣೈ, ಪೊಕ್ಕರವೇನಿ ಮತ್ತು ನವಾಕ್ಕುಲಂ ಪ್ರದೇಶದಲ್ಲಿ ಸರ್ಕಾರಿ ಪಡೆಗಳು ಮತ್ತು ಬಂಡುಕೋರರ ನಡುವೆ ಪುನಃ ಘರ್ಷಣೆ ಸಂಭವಿಸಿತೆಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಈ ಸಂಘರ್ಷದಲ್ಲಿ 6 ಎಲ್‌ಟಿಟಿಇ ಉಗ್ರರು ಸತ್ತಿದ್ದು, ಅನೇಕ ಮಂದಿ ಗಾಯಗೊಂಡರು. ಮೂವರು ಸೈನಿಕರು ಹತರಾಗಿದ್ದು,ಐವರಿಗೆ ಗಾಯಗಳಾಗಿವೆ ಎಂದು ಸಚಿವಾಲಯ ಹೇಳಿದೆ.

ಕಳೆದ ಒಂದು ವರ್ಷದಿಂದ ಸಂಘರ್ಷದ ತೀವ್ರತೆಯು ನಾರ್ವೆ ಪ್ರಾಯೋಜಿತ ಐದು ವರ್ಷಗಳ ಕದನವಿರಾಮ ಒಪ್ಪಂದದ ಉಳಿವಿಗೆ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ.
ಮತ್ತಷ್ಟು
ಯುದ್ಧ ಮಾಡುವ ಪರಿಸ್ಥಿತಿಯಲ್ಲಿ ಅಮೆರಿಕವಿಲ್ಲ
ಆಸ್ಟ್ರೇಲಿಯದಲ್ಲಿ "ಗಾಂಧಿ ಮೈ ಫಾದರ್"
ಚೀನದಲ್ಲೂ ಐಶ್ವರ್ಯ ಕ್ರೇಜ್
ಇರಾಕ್ ಪಡೆಗಳ ಸ್ವಾವಲಂಬನೆಗೆ ಇನ್ನೂ ಒಂದು ವರ್ಷ
ಪಾಕ್ ಅಧ್ಯಕ್ಷೀಯ ಚುನಾವಣೆ: ಅಟಾರ್ನಿಗೆ ನೋಟಿಸ್
ಹಿಂಸಾ ಪೀಡಿತ ರಾಷ್ಟ್ರದಲ್ಲಿ ಗಾಂಧಿ ಧ್ವನಿ