ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಪಾಕ್ ಅಧ್ಯಕ್ಷ ಚುನಾವಣೆ: ಚುನಾವಣಾ ಆಯೋಗ ಸಜ್ಜು
ಪಾಕಿಸ್ತಾನದಲ್ಲಿ ಮುಕ್ತ ಹಾಗೂ ಪಾರದರ್ಶಕ ಅಧ್ಯಕ್ಷೀಯ ಚುನಾವಣೆಗೆ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಚುನಾವಣಾ ಆಯೋಗವು ಘೋಷಿಸಿದೆ.

ಅಕ್ಟೋಬರ್ ಆರರಂದು ನಡೆಯುವ ಮತದಾನಕ್ಕೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ನಡೆಸುವಂತೆ ರಾಷ್ಟ್ರೀಯ ಮತ್ತು ಪ್ರಾಂತೀಯ ಅಸೆಂಬ್ಲಿಗಳ ಸಭಾಪತಿಗಳಿಗೆ ಚುನಾವಣಾ ಆಯೋಗವು ಸೂಚನೆ ನೀಡಿದೆ ಎಂದು ಚುನಾವಣಾ ಆಯೋಗ ಕಾರ್ಯದರ್ಶಿ ಕನ್ವರ್ ಮಹಮ್ಮದ್ ಇಸ್ಲಾಮಾಬಾದ್‌ನಲ್ಲಿ ತಿಳಿಸಿದ್ದಾರೆ.

ಮತದಾನವು ಹತ್ತು ಗಂಟೆಯಿಂದ ಮೂರು ಗಂಟೆಯವರೆಗೆ ನಡೆಯಲಿದೆ.

ಮುಖ್ಯ ಚುನಾವಣಾ ಆಯುಕ್ತ, ನಿವೃತ್ತ ನ್ಯಾಯಮೂರ್ತಿ ಖಾಜಿ ಮಹಮ್ಮದ್ ಫಾರೂಕ್ ಅವರು ಇಸ್ಲಾಮಾಬಾದ್‌ನಲ್ಲಿ ಚುನಾವಣಾಧಿಕಾರಿಯಾಗಿ, ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಪ್ರಾಂತೀಯ ಅಸೆಂಬ್ಲಿ ಕ್ಷೇತ್ರಗಳ ಅಧ್ಯಕ್ಷೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಅಧ್ಯಕ್ಷೀಯ ಚುನಾವಣೆಗಾಗಿ ರಾಷ್ಟ್ರೀಯ ಅಸೆಂಬ್ಲಿ ಮತ್ತು ಸೆನೆಟ್‌ನ ವಿಶೇಷ ಅಧಿವೇಶನದ ಕಲಾಪಗಳನ್ನು ಮುಖ್ಯ ಚುನಾವಣಾ ಆಯುಕ್ತರು ನಿರ್ವಹಿಸಲಿದ್ದಾರೆ ಎಂದು ಕನ್ವರ್ ತಿಳಿಸಿದರು.

ಪಾಕಿಸ್ತಾನದ ಅಧ್ಯಕ್ಷೀಯ ಚುನಾವಣೆಯು ರಹಸ್ಯ ಮತದಾನದ ಮೂಲಕ ನಡೆಯಲಿದೆ.
ಮತ್ತಷ್ಟು
ಶ್ರೀಲಂಕಾ: 6 ಎಲ್‌ಟಿಟಿಇ ಉಗ್ರರ ಹತ್ಯೆ
ಯುದ್ಧ ಮಾಡುವ ಪರಿಸ್ಥಿತಿಯಲ್ಲಿ ಅಮೆರಿಕವಿಲ್ಲ
ಆಸ್ಟ್ರೇಲಿಯದಲ್ಲಿ "ಗಾಂಧಿ ಮೈ ಫಾದರ್"
ಚೀನದಲ್ಲೂ ಐಶ್ವರ್ಯ ಕ್ರೇಜ್
ಇರಾಕ್ ಪಡೆಗಳ ಸ್ವಾವಲಂಬನೆಗೆ ಇನ್ನೂ ಒಂದು ವರ್ಷ
ಪಾಕ್ ಅಧ್ಯಕ್ಷೀಯ ಚುನಾವಣೆ: ಅಟಾರ್ನಿಗೆ ನೋಟಿಸ್