ಯಂಗೂನ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ವಿರುದ್ಧ ಮಿಲಿಟರಿ ಕಾರ್ಯಾಚರಣೆಯಲ್ಲಿ ಭಾಗಿಯಾಗಲು ಒಪ್ಪದ ಮಯನ್ಮಾರಿನ ಸೇನಾ ಅಧಿಕಾರಿಯೊಬ್ಬರು ಆಡಳಿತಾರೂಢ ಜುಂಟಾವನ್ನು ತೊರೆದು ತನ್ನ ಮಗನೊಂದಿಗೆ ಥಾಯ್ಲೆಂಡ್‌ಗೆ ಪರಾರಿಯಾಗಿದ್ದಾರೆ.
ಮಯನ್ಮಾರಿನ ಭಿನ್ನಮತೀಯರು ವಾಸಿಸುತ್ತಿರುವ ಸ್ಕಾಂಡಿನೇವಿಯದಲ್ಲಿ ಆಶ್ರಯ ಪಡೆಯುವ ವಿಶ್ವಾಸವನ್ನು ಹೊಂದಿದ್ದೇನೆ ಎಂದು 42 ವರ್ಷದ ಸೇನಾ ಅಧಿಕಾರಿ ಮೇಜರ್ ಹಟಯ್ ವಿನ್ ತಿಳಿಸಿದ್ದಾರೆ.
ಒಬ್ಬ ಬೌದ್ಧ ಧರ್ಮೀಯನಾಗಿ, ಬೌದ್ಧ ಸನ್ಯಾಸಿಗಳನ್ನು ಮತ್ತು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಬೀದಿಗಳಲ್ಲೇ ಗುಂಡಿಕ್ಕಿ ಕೊಲ್ಲಲಾಗಿದೆ ಎಂಬುದನ್ನು ಕೇಳಿ ತೀರಾ ಆಘಾತವಾಯಿತು ಎಂದು ದೂರದರ್ಶನ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಈ ಅಧಿಕಾರಿಯು ರಾಜಕೀಯ ಆಶ್ರಯ ಪಡೆಯುವುದಕ್ಕಾಗಿ ಥಾಯ್ಲೆಂಡ್‌ಗೆ ಆಗಮಿಸಿರುವುದು ಕಾನೂನಿನಡಿ ಖಚಿತವಾದಲ್ಲಿ, ಆತನಿಗೆ ಇನ್ನೊಂದು ದೇಶಕ್ಕೆ ಪ್ರಯಾಣಿಸಲು ಅವಕಾಶ ನೀಡಲಾಗುವುದು ಎಂದು ಪ್ರಧಾನಮಂತ್ರಿ ಸುರಾಯುದ್ ಚುಲಾನಾಂಟ್ ತಿಳಿಸಿದ್ದಾರೆ.
|