ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
"ಹಾರ್ವರ್ಡ್ ಎಂಬಿಎ ಪಡೆದ ಮೊದಲ ಮನೋರೋಗಿ ಬುಷ್"
ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರನ್ನು "ಹಾರ್ವರ್ಡ್‌ನ ಎಂಬಿಎ ಪಡೆದ, ಮಾನಸಿಕ ಸ್ಥಿಮಿತ ಕಳೆದುಕೊಂಡ ಮೊದಲನೇ ವ್ಯಕ್ತಿ" ಎಂದು ರಾಜಕೀಯ ವಿಶ್ಲೇಷಕ ಮತ್ತು ಲೇಖಕ ಆನ್ ಕೋಲ್ಟರ್ ಅವರು ವರ್ಣಿಸಿದ್ದಾರೆ.

9/11 ಮಿಲಿಯಾಧಿಪತಿ ವಿಧವೆಯರನ್ನು "ಹಾರ್ಪೀ"ಗಳು (ತಲೆ ಮತ್ತು ದೇಹ ಮಹಿಳೆಯದು, ಬಾಲ ಹಕ್ಕಿಯಂತಿರುವ ಗ್ರೀಕ್ ಭೂತ) ಎಂದು ಕರೆದು ತೀವ್ರ ಆಕ್ರೋಶಕ್ಕೆ ತುತ್ತಾಗಿದ್ದ ಕೋಲ್ಟರ್ ಅವರು, ತಮ್ಮ "ಡೆಮೋಕ್ರಾಟ್‌ಗಳಿಗೆ ಯಾವುದೇ ಮೆದುಳಿದ್ದರೆ, ಅವರು ರಿಪಬ್ಲಿಕನ್ನರಿರಬೇಕು" ಎಂಬ ಹೊಸ ಪುಸ್ತಕದಲ್ಲಿ ಬುಷ್ ವಿರುದ್ಧ ತೀವ್ರ ಕಿಡಿ ಕಾರಿದ್ದಾರೆ.

"ಅಧ್ಯಕ್ಷ ಜಾರ್ಜ್ ಬುಷ್ ಅವರು ಹಾರ್ವರ್ಡ್‌ನ ಎಂಬಿಎ, ಅಮೆರಿಕ ವಾಯುಪಡೆಯಿಂದ ಪದವಿ ಪಡೆದು, ಟೆಕ್ಸಾಸ್ ಗವರ್ನರ್ ಆಗಿ ಮತ್ತು ಅಮೆರಿಕದ ಅಧ್ಯಕ್ಷರಾಗಿ ಎರಡು ಬಾರಿ ಆಯ್ಕೆಯಾದ ಮೊದಲ ಮನೋರೋಗಿಯಾಗಿದ್ದಾರೆ ಎಂದು ಕೋಲ್ಟರ್ ಅವರು ತಮ್ಮ ಪುಸ್ತಕದಲ್ಲಿ ಬರೆದದ್ದನ್ನು ನ್ಯೂಯಾರ್ಕ್ ಡೈಲಿ ಪತ್ರಿಕೆಯು ವರದಿ ಮಾಡಿವೆ.
ಮತ್ತಷ್ಟು
ಪಾಕ್: 'ಸ್ಥಗಿತ'ಗೊಂಡ ಮಾತುಕತೆಯಲ್ಲಿ ಮಹತ್ವದ ಬೆಳವಣಿಗೆ
ಮಯನ್ಮಾರ್: ಸೇನಾಧಿಕಾರಿ ದೇಶತ್ಯಾಗ
ಪಾಕ್ ಅಧ್ಯಕ್ಷ ಚುನಾವಣೆ: ಚುನಾವಣಾ ಆಯೋಗ ಸಜ್ಜು
ಶ್ರೀಲಂಕಾ: 6 ಎಲ್‌ಟಿಟಿಇ ಉಗ್ರರ ಹತ್ಯೆ
ಯುದ್ಧ ಮಾಡುವ ಪರಿಸ್ಥಿತಿಯಲ್ಲಿ ಅಮೆರಿಕವಿಲ್ಲ
ಆಸ್ಟ್ರೇಲಿಯದಲ್ಲಿ "ಗಾಂಧಿ ಮೈ ಫಾದರ್"