ನವೆಂಬರ್ 22ರಂದು ನಡೆಯಲಿರುವ ಶಾಸನ ಸಭೆಗಳ ಚುನಾವಣೆ ಮುಂದೂಡುವಂತೆ ನೇಪಾಳ ಸರಕಾರವು ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
ಇಂದು ನಡೆಯಲಿರುವ ನಾಮಪತ್ರ ಸಲ್ಲಿಕೆ ಸೇರಿದಂತೆ ಎಲ್ಲಾ ಚುನಾವಣೆ ಕಾರ್ಯಕ್ರಮಗಳನ್ನು ತಡೆಹಿಡಿಯುವಂತೆ ಶುಕ್ರವಾರ ಬೆಳಗ್ಗೆ ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
ಪ್ರಧಾನಮಂತ್ರಿ ಕಚೇರಿಯಿಂದ ಚುನಾವಣಾ ಆಯೋಗಕ್ಕೆ ಪತ್ರವನ್ನು ಕಳುಹಿಸಲಾಗಿದ್ದು, ಹೊಸ ಚುನಾವಣಾ ದಿನಾಂಕವನ್ನು ಸೂಚಿಸಲಾಗಿಲ್ಲ.
ಈ ನಿರ್ಧಾರವು ನೇಪಾಳದ ಶಾಸನ ಸಭೆಗಳ ಚುನಾವಣೆ ಕುರಿತಾದ ಅನಿಶ್ಚಿತತೆಯನ್ನು ಕೊನೆಗೊಳಿಸಿದಂತಾಗಿದೆ.
ಈ ಮೊದಲು, ಮತದಾನವು ಮುಂದೂಡುವುದು ಖಚಿತ ಎಂದು ಸಚಿವ ಮತ್ತು ಆಡಳಿತಾರೂಢ ನೇಪಾಳಿ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪೌದಲ್ ಅವರು ತಿಳಿಸಿದ್ದರು.
|