ತನ್ನ ಮೊದಲ ರಾತ್ರಿಯನ್ನು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಕಳೆಯುವುದರ ಮೂಲಕ ನವ ವಧುವೊಬ್ಬಳು ತಮ್ಮ ವೈವಾಹಿಕ ಜೀವನವನ್ನು ಅತ್ಯಂತ ಯಾತನಾಮಯವಾಗಿ ಪ್ರಾರಂಭಿಸಿದ್ದಾರೆ.
ಕುಂಬ್ರಿಯಾದ ಅಲ್ಸ್‌ವಾಟರ್‌ನ ಶ್ಯಾರೋ ಬೇ ಹೋಟೇಲಿನಲ್ಲಿ ರಿಚರ್ಡ್ ಹಾಗ್ ಅವರನ್ನು ಮದುವೆಯಾದ ಶಾರೋನ್ ಪಿಕಾಕ್ ಎಂಬಾಕೆ, ತನ್ನ ಮೈದುನನಿಂದ ಹೊಡೆತ ತಿಂದ ಪರಿಣಾಮವಾಗಿ ರಾತ್ರಿ ಆಸ್ಪತ್ರೆಯಲ್ಲಿ ಕಳೆಯುವಂತಾಯಿತು. ಮದುವೆಯ ಔತಣಕೂಟದಲ್ಲಿ ಭಾವ ಜಾನ್ ಡೇವೀಸ್‌ನಿಂದ ಹೊಡೆತ ತಿಂದ ಆಕೆ ಕೆನ್ನೆಯ ಮೂಳೆ ಮುರಿದುಕೊಂಡಿದ್ದರು.
ಆದರೆ, ಶಾರೋನ್‌ಗೆ ಹಲ್ಲೆ ನಡೆಸಿರುವುದನ್ನು ಶಾರೋನ್‌ನ ಸಹೋದರಿಯನ್ನು ಮದುವೆಯಾಗಿದ್ದ ಡೇವೀಸ್, ಕ್ಯಾರ್ಲಿಸಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅಲ್ಲಗಳೆದಿದ್ದಾರೆ.
|