ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಕೈಕಾಲು ಕಟ್ಟಿಕೊಂಡು ಈಜಿದ ಬಾಲಕಿ
ಚೀನದ 10 ವರ್ಷದ ಈ ಬಾಲೆಗೆ ಇಂಗ್ಲೀಷ್ ಕಾಲುವೆಯಲ್ಲಿ ಯಶಸ್ವಿಯಾಗಿ ಈಜುವ ತವಕ. ಅದಕ್ಕಾಗಿ ತರಬೇತಿ ಪಡೆಯಲು ಕೈಕಾಲಿಗೆ ಹಗ್ಗಬಿಗಿದುಕೊಂಡು ಯಾಂಗ್ಟೆ ನದಿಗೆ ಹಾರಿ ಡಾಲ್ಫಿನ್ ಶೈಲಿಯಲ್ಲಿ ಈಜಿದಳು. ಸುಮಾರು 2 ಮೈಲುಗಳ ದೂರದವರೆಗೆ ಮೂರು ಗಂಟೆಗಳ ಕಾಲ ಹಾಂಗ್ ಲೀ ಈಜುವಾಗ ಅವಳ ತಂದೆ ಬದಿಯಲ್ಲೇ ಈಜುತ್ತಿದ್ದರು.

ಹಾಂಗ್ ಲೀ ತಾಯಿ ಕೂಗಿದಾಗಲೇ ಅವಳು ಈಜನ್ನು ನಿಲ್ಲಿಸಿದಳು. ಮುಂದಿನ ಆಗಸ್ಟ್‌ನಲ್ಲಿ ಬಿಜೀಂಗ್ ಒಲಂಪಿಕ್ಸ್‌ಗೆ ಆತಿಥ್ಯ ವಹಿಸಿದ್ದು, ಒಲಂಪಿಕ್ ಜ್ವರದಲ್ಲಿರುವ ಚೀನದಲ್ಲಿ ಬಾಲಕಿಯ ಸಾಹಸ ಬಾವೋದ್ರೇಕ ಮೂಡಿಸಿದೆ. ಆದರೆ ಇಂತಹ ಅಪಾಯಗಳಿಗೆ ಮಗಳನ್ನು ಆಕೆಯ ಪೋಷಕರು ಒಡ್ಡಬಹುದೇ ಎಂಬ ವಾದಕ್ಕೂ ಇದು ಆಸ್ಪದ ಕಲ್ಪಿಸಿದೆ.

ಬಾಲಕಿಗೆ ಇಂಗ್ಲೀಷ್ ಕಾಲುವೆ ಈಜಬೇಕೆಂಬ ಕನಸು. ಇದಕ್ಕಾಗಿ ತರಬೇತಿ ಪಡೆಯಲು ಆ ರೀತಿ ಈಜಲು ಒತ್ತಾಯಿಸಿದಳೆಂದು ಅವಳ ತಂದೆ ಹೇಳಿದರು. ದಂತಕತೆಯೊಂದರ ಪ್ರಕಾರ, ಈಜುವ ಈ ವಿಧಾನವನ್ನು ಪ್ರಾಚೀನ ಕಾಲದಲ್ಲಿ ಮಾನಸಿಕ ಸಿದ್ಧತೆಯ ತಂತ್ರವಾಗಿ ಮತ್ತು ಯೋಧರು ಸೆರೆಸಿಕ್ಕಿದಾಗ ತಪ್ಪಿಸಿಕೊಳ್ಳುವ ತಂತ್ರವಾಗಿ ಅಬ್ಯಾಸ ಮಾಡುತ್ತಿದ್ದರು.
ಮತ್ತಷ್ಟು
ಮೂಗುತಿ ಧಾರಣೆ: ಮಹಿಳೆಗೆ ನೌಕರಿ ವಾಪಸ್
ಐಸಿಯುನಲ್ಲಿ ಪ್ರಥಮ ರಾತ್ರಿ ಕಳೆದ ನವವಧು!
ಚುನಾವಣೆ ಮುಂದೂಡಿಕೆಗೆ ನೇಪಾಳ ಸರಕಾರ ಮನವಿ
ಚುನಾವಣೆ ಬಳಿಕವೂ ಪಿಪಿಪಿ ಜತೆ ಮಾತುಕತೆ: ಪಾಕ್
"ಹಾರ್ವರ್ಡ್ ಎಂಬಿಎ ಪಡೆದ ಮೊದಲ ಮನೋರೋಗಿ ಬುಷ್"
ಪಾಕ್: 'ಸ್ಥಗಿತ'ಗೊಂಡ ಮಾತುಕತೆಯಲ್ಲಿ ಮಹತ್ವದ ಬೆಳವಣಿಗೆ