ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಮ್ಯಾನ್ಮಾರ್ ಮೇಲೆ ದಿಗ್ಬಂಧನಕ್ಕೆ ವಿರೋಧ
ಪ್ರಸಕ್ತ ಆಸಿಯಾನ್ ಮುಖಂಡತ್ವ ವಹಿಸಿರುವ ಸಿಂಗಪುರ,ಮ್ಯಾನ್ಮಾರ್‌ನ ಬಿಕ್ಕಟ್ಟನ್ನು ನಿಭಾಯಿಸಲು ಅಂತಾರಾಷ್ಟ್ರೀಯ ಸಮುದಾಯ ಮಧ್ಯಸ್ಥಿಕೆ ವಹಿಸಬೇಕೆಂದು ಕೋರಿದೆ. ಆದರೆ ಮ್ಯಾನ್ಮಾರ್‌ ವಿರುದ್ಧ ದಿಗ್ಬಂಧನ ವಿಧಿಸುವ ಯೋಜನೆಯನ್ನು ಅದು ತೀವ್ರವಾಗಿ ವಿರೋಧಿಸಿದ್ದು, ಅಂತಹ ಕ್ರಮಗಳಿಂದ ಪ್ರತಿಹಾನಿಯಾಗುತ್ತದೆಂದು ಹೇಳಿದೆ.

ದಿಗ್ಬಂಧನದಿಂದ ಮ್ಯಾನ್ಮಾರ್ ಜನತೆಗೆ ನೋವಾಗುತ್ತದೆಯೇ ಹೊರತು ಆಡಳಿತರೂಢ ಜುಂಟಾಗೆ ಅದರಿಂದ ಪರಿಣಾಮವೇನೂ ಇಲ್ಲ ಎಂದು ಪ್ರಧಾನಮಂತ್ರಿ ಲೀ ಸೈನ್ ಲೂಂಗ್ ತಿಳಿಸಿದರು.

ಸಿಎನ್ಎನ್ ಜತೆ ಸಂದರ್ಶನದಲ್ಲಿ ಮಾಚನಾಡುತ್ತಿದ್ದ ಅವರು, ಈ ರಾಷ್ಟ್ರವು ವಿಶ್ವದಿಂದ ಬೇರ್ಪಟ್ಟು ಏಕಾಂಗಿಯಾಗಲು ಇಚ್ಛಿಸಿದೆ. ಆದ್ದರಿಂದ ಸಂಪರ್ಕ ಕಡಿತದಿಂದ ಅದಕ್ಕೆ ನೋವೇನೂ ಆಗುವುದಿಲ್ಲ. ದಿಗ್ಬಂಧನ ಹೇರುವುದಾದರೆ, ಸಿಂಗಪುರ ಮತ್ತು ಆಸಿಯಾನ್ ರಾಷ್ಟ್ರಗಳು ಮಾತ್ರವಲ್ಲ, ಮ್ಯಾನ್ಮಾರ್‌ನಲ್ಲಿ ಹೂಡಿಕೆ ಮಾಡಿದ ಪಾಶ್ಚಿಮಾತ್ಯ ರಾಷ್ಟ್ರಗಳು, ನೆರೆಯ ರಾಷ್ಟ್ರವಾದ ಚೀನ ಕೂಡ ಅದನ್ನು ಮಾಡಬೇಕಾಗಿದೆ ಎಂದು ಲೀ ಹೇಳಿದರು.

ಈ ಬಿಕ್ಕಟ್ಟು ನಿವಾರಣೆ ಈಶಾನ್ಯ ಏಷ್ಯ ರಾಷ್ಟ್ರಗಳಿಂದ ಮಾತ್ರ ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಸಮುದಾಯ ಮಧ್ಯಸ್ಥಿಕೆ ವಹಿಸಬೇಕಾಗುತ್ತದೆ ಎಂದು ಅವರು ಶಂಕೆ ವ್ಯಕ್ತಪಡಿಸಿದರು.
ಮತ್ತಷ್ಟು
ಅಧ್ಯಕ್ಷ ಚುನಾವಣೆ:ಮುಷರ್ರಫ್ ಜಯ ನಿರೀಕ್ಷೆ
ಕೈಕಾಲು ಕಟ್ಟಿಕೊಂಡು ಈಜಿದ ಬಾಲಕಿ
ಮೂಗುತಿ ಧಾರಣೆ: ಮಹಿಳೆಗೆ ನೌಕರಿ ವಾಪಸ್
ಐಸಿಯುನಲ್ಲಿ ಪ್ರಥಮ ರಾತ್ರಿ ಕಳೆದ ನವವಧು!
ಚುನಾವಣೆ ಮುಂದೂಡಿಕೆಗೆ ನೇಪಾಳ ಸರಕಾರ ಮನವಿ
ಚುನಾವಣೆ ಬಳಿಕವೂ ಪಿಪಿಪಿ ಜತೆ ಮಾತುಕತೆ: ಪಾಕ್