ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ನೀಲಿ ಕಾರುಗಳಿಗೆ ನವಿಲಿನಿಂದ ಸಂಚಕಾರ!
ನೀಲಿ ಕಾರನ್ನು ಕಂಡಕೂಡಲೇ ತನ್ನ ಪ್ರೇಮ ಪ್ರತಿಸ್ಪರ್ಧಿಯೆಂದು ಅಪಾರ್ಥ ಮಾಡಿಕೊಂಡು ರೊಚ್ಚಿಗೆದ್ದ ನವಿಲೊಂದು 4,000 ಪೌಂಡ್ ನಷ್ಟಕ್ಕೆ ಕಾರಣವಾಗಿದೆ.

ಸಾಮರ್‌ಸೆಟ್‌ನ ನೈಋತ್ಯ ಭಾಗದ ಬ್ರಿಜ್‌ವಾಟರ್‌ನಲ್ಲಿ ನೆಲೆಸಿರುವ ರಾನ್ ಎಂಬ ಹೆಸರಿನ ಈ ಹಕ್ಕಿಯು ಯಾವುದೇ ನೀಲಿ ಬಣ್ಣದ ಕಾರುಗಳನ್ನು ಕಂಡಕೂಡಲೇ ಅದನ್ನು ಗಂಡು ನವಿಲು ಎಂದು ತಿಳಿದು, ಅದರ ಮೇಲೆ ಆಕ್ರಮಣ ಪ್ರಾರಂಭಿಸುತ್ತಿತ್ತು. ತೀವ್ರವಾಗಿ ತನ್ನ ರೆಕ್ಕೆಗಳನ್ನು ಚದುರಿಸಿ, ಬಾಲವನ್ನು ಕೆಲವು ಹೊತ್ತು ತಿರುಗಿಸಿದ ನಂತರ ವಾಹನವನ್ನು ಪರಚಿ ಗಾಯಗೊಳಿಸುತ್ತಿತ್ತು.

ಆ ಬಳಿಕ, ಈ ಭವನದ ಒಡೆಯ ಸರ್ ಬೆಂಜಮಿನ್ ಸ್ಲೇಡ್ ಅವರು, ನೀಲಿ (ನವಿಲಿನ) ಬಣ್ಣದ ಕಾರುಗಳನ್ನು ನವಿಲಿನಿಂದ ರಕ್ಷಿಸುವ ನಿಟ್ಟಿನಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕಾಯಿತು.

ಉಳಿದ ಕಾರುಗಳ ಬಗ್ಗೆ ಅಷ್ಟಾಗಿ ಆಸಕ್ತಿ ವಹಿಸದ ಈ ನವಿಲು, ಪಿಕಾಕ್ ಬ್ಲೂ ಕಾರನ್ನು ಕಂಡೊಡನೆ ಸಿಟ್ಟುಗೊಂಡು, ತನ್ನನ್ನು ತಾನೆ ನಿಯಂತ್ರಿಸಲಾಗದೆ ಉದ್ರಿಕ್ತಗೊಳ್ಳುತ್ತದೆ ಎಂದು ಬೆಂಜಮಿನ್ ಅವರ ಉಲ್ಲೇಖಿಸಿದ್ದನ್ನು ಡೈಲೀ ಮೇಲ್ ವರದಿ ಮಾಡಿದೆ.

ಸಾಮರ್‌ಸೆಟ್‌ನ 13ನೇ ಶತಮಾನದ ಮೌನ್ಸೆಲ್ ಹೌಸ್‌ನಲ್ಲಿ ಈ ರಾನ್ ಎಂಬ ನವಿಲು ಉಳಿದ 12 ನವಿಲುಗಳೊಂದಿಗೆ ವಾಸಿಸುತ್ತಿದೆ.

ನವಿಲಿನ ಈ ಹುಚ್ಚು ವರ್ತನೆಯು ಕಡುನೀಲಿ ಬಣ್ಣದ ಕಾರಿನ ಬಗೆಗಿನ ಅದರ ಕಲ್ಪನೆಗೆ ಸಂಬಂಧಿಸಿದೆ ಎಂಬುದು ಪಕ್ಷಿತಜ್ಞ ಕ್ವಂಟನ್ ಸ್ಪ್ರಾಟ್ ಅವರ ಅಭಿಪ್ರಾಯವಾಗಿದೆ.

ಮತ್ತಷ್ಟು
ಬ್ರಿಟನ್: ಅವಿವಾಹಿತ ಪೋಷಕರ ಸಂಖ್ಯೆಯಲ್ಲಿ ಹೆಚ್ಚಳ
ಮ್ಯಾನ್ಮಾರ್ ಮೇಲೆ ದಿಗ್ಬಂಧನಕ್ಕೆ ವಿರೋಧ
ಅಧ್ಯಕ್ಷ ಚುನಾವಣೆ:ಮುಷರ್ರಫ್ ಜಯ ನಿರೀಕ್ಷೆ
ಕೈಕಾಲು ಕಟ್ಟಿಕೊಂಡು ಈಜಿದ ಬಾಲಕಿ
ಮೂಗುತಿ ಧಾರಣೆ: ಮಹಿಳೆಗೆ ನೌಕರಿ ವಾಪಸ್
ಐಸಿಯುನಲ್ಲಿ ಪ್ರಥಮ ರಾತ್ರಿ ಕಳೆದ ನವವಧು!