ರೇಸಿಂಗ್ ಕಾರು ಮಾದರಿಯ ಹಾಸಿಗೆ, ಐಷಾರಾಮಿ ಬಾತ್‌ರೂಮ್, ಆರೈಕೆ ಮಾಡಲು ಒಬ್ಬ ಸೇವಕರ ಪಡೆ ಹಾಗೂ ಇತರ ಅತ್ಯಾಧುನಿಕ ಸವಲತ್ತುಗಳು...
ಇದು ಯಾವುದೇ ಶ್ರೀಮಂತ ವ್ಯಕ್ತಿಯ ಮನೆಯ ಚಿತ್ರಣವಲ್ಲ. ಅಮೆರಿಕದಲ್ಲಿರುವ ನಾಯಿಯೊಂದು ಪಡೆಯುತ್ತಿರುವ ಐಷಾರಾಮಿ ಸೌಲಭ್ಯಗಳು!
ತನ್ನದೇ ಆದ ಸ್ನಾನಗೃಹ, ಟಿವಿ ಮುಂತಾದವನ್ನು ಹೊಂದಿರುವ ಈ ನಾಯಿ ಕೊಂಚಿಟಾ, ವಿಶ್ವದ ಅತ್ಯಂತ ಐಷಾರಾಮಿ ಶ್ವಾನ ಎಂದು ಹೇಳಲಡ್ಡಿಯಿಲ್ಲ.
ಆಕೆಯೇ ನನ್ನ ಜೀವ ಎಂದು ಹೇಳುವ ಅಮೆರಿಕದ ಕೋಟ್ಯಧಿಪತಿಯೊಬ್ಬರ ಮಗಳಾದ ಗೈಲ್ ಪೋಸ್ನರ್ ಈ ಒಂದು ವರ್ಷದ ಕೊಂಚಿಟಾಳಿಗಾಗಿ ತಿಂಗಳಿಗೆ ಏಳುಸಾವಿರ ಪೌಂಡ್ ಹಣವನ್ನು ಖರ್ಚು ಮಾಡುತ್ತಾರೆ. ಭೋಜನಪ್ರಿಯನಾದ ಕೊಂಚಿಟಾ, ಗೈಲ್ ಮನೆಯಲ್ಲಿರುವ ತನ್ನದೇ ಕುರ್ಚಿಯಲ್ಲಿ ಕುಳಿತು ಉಣ್ಣುತ್ತದೆ. ಒಂದು ಪೌಂಡ್ ತೂಗುವ ಈ ನಾಯಿಗೆ ತನ್ನದೇ ಆದ, 6000 ಪೌಂಡ್ ಮೌಲ್ಯದ ಡಿಸೈನರ್ ವಾರ್ಡ್‌ರೋಬ್ ಕೂಡ ಇದೆ. ಎಲ್ಲಕ್ಕಿಂತ ಮಿಗಿಲಾಗಿ, ಈ ಕೊಂಚಿಟಾ, ವಜ್ರಖಚಿತ ಕಾರ್ಟಿಯರ್ ನೆಕ್ಲೇಸ್ ಒಂದರ ಒಡತಿಯೂ ಹೌದು!
|