ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಹೆಲಿಕಾಪ್ಟರ್ ಅಪಘಾತ: ನಾಲ್ವರ ಸಾವು
ಭೂಕಂಪಪೀಡಿತ ಪ್ರದೇಶಗಳ ವೀಕ್ಷಣೆಗೆ ತೆರಳುತ್ತಿದ್ದ ಅಧ್ಯಕ್ಷ ಮುಷರ್ರಫ್ ಅವರಿದ್ದ ಹೆಲಿಕಾಪ್ಟರ್ ಜತೆಯಿದ್ದ ಇನ್ನೊಂದು ಹೆಲಿಕಾಪ್ಟರ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಪಘಾತಕ್ಕೀಡಾಗಿ ನಾಲ್ವರು ಸೈನಿಕರು ಸತ್ತಿದ್ದಾರೆ ಮತ್ತು ಮುಷರ್ರಫ್ ಅವರ ವಕ್ತಾರ ಗಾಯಗೊಂಡಿದ್ದಾರೆ.

ಇನ್ನೊಂದು ಹೆಲಿಕಾಪ್ಟರ್‌ನಲ್ಲಿದ್ದ ಮುಷರ್ರಫ್ ತಮ್ಮ ಸ್ಥಳವನ್ನು ಸುರಕ್ಷಿತವಾಗಿ ಮುಟ್ಟಿದರು ಎಂದು ಮಿಲಿಟರಿ ವಕ್ತಾರ ಮೆ.ಜನರಲ್ ವಾಹೀದ್ ಅರ್ಷಾದ್ ತಿಳಿಸಿದರು.ಅಧ್ಯಕ್ಷರ ವಕ್ತಾರ ಮತ್ತು ಮೇ ಜನರಲ್ ರಷೀದ್ ಖುರೇಷಿ ಮತ್ತಿತರ ಅಧಿಕಾರಿಗಳಿದ್ದ ಪುಮಾ ಹೆಲಿಕಾಪ್ಟರ್ ಜೇಲಂ ಕಣಿವೆಯಲ್ಲಿ ಗಾರಿ ದುಪಟ್ಟಾ ಬಳಿಯ ಮಾಜೋಹಿ ಬಳಿ ಅಪಘಾತಕ್ಕೀಡಾಯಿತು.

ನಾಲ್ವರು ಯೋಧರು ಸತ್ತಿದ್ದು ಅಧ್ಯಕ್ಷರ ಮಾಧ್ಯಮ ಸಲಹೆಗಾರ ಮೇ. ಜನರಲ್ ರಷೀದ್ ಖುರೇಷಿ ಗಾಯಗೊಂಡಿದ್ದಾರೆ ಎಂದು ಅರ್ಷಾದ್ ತಿಳಿಸಿದ್ದಾರೆ. ಎರಡು ವರ್ಷಗಳ ಕೆಳಗೆ ಭೂಕಂಪದಿಂದ ಹಾನಿಗೀಡಾದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ವಾಯವ್ಯ ಮುಂಚೂಣಿ ಪ್ರಾಂತ್ಯಕ್ಕೆ ಮುಷರ್ರಫ್ ಮತ್ತು ಪ್ರಧಾನಮಂತ್ರಿ ಶೌಕತ್ ಅಜೀಜ್ ಭೇಟಿ ನೀಡುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿತು.
ಮತ್ತಷ್ಟು
ಭಾರತ, ಪಾಕ್‌ನಲ್ಲಿ ರಾಜಕೀಯ ಸ್ಥಿತ್ಯಂತರ: ಪಾಕ್ ಜ್ಯೋತಿಷಿ
ಚೀನಾ ಟೈಪೂನ್, 1 ಮಿಲಿಯ, ಜನರ, ಸ್ಥಳಾಂತರ
ತನ್ನ ಗೆಲುವನ್ನು, ಸ್ವೀಕರಿಸಿ, ವಿರೋಧ ಪಕ್ಷಗಳಿಗೆ, ಮುಷರಫ್ ಕರೆ
ಅಧ್ಯಕ್ಷ ಚುನಾವಣೆ:ಮುಷರ್ರಫ್ ಗೆಲುವು
ಇನ್ನು "ನಾಯಿ ಪಾಡು" ಎನ್ನುವಂತಿಲ್ಲ!
ನೀಲಿ ಕಾರುಗಳಿಗೆ ನವಿಲಿನಿಂದ ಸಂಚಕಾರ!