ಅಧ್ಯಕ್ಷ ಮುಷರ್ರಫ್ ಅವರಿಗೆ ಬೆಂಗಾವಲಾಗಿದ್ದ ಮಿಲಿಟರಿ ಹೆಲಿಕಾಪ್ಟರ್ ಸೋಮವಾರ ಅಪಘಾತಕ್ಕೀಡಾಗಿದ್ದರಿಂದ ಪಾಕಿಸ್ತಾನ ನಾಯಕ ಮುಷರ್ರಫ್ ಸುರಕ್ಷತೆ ಬಗ್ಗೆ ಆತಂಕವನ್ನು ಮೂಡಿಸಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಫರಾಬಾದ್ ಬಳಿ ಸೇನೆಯ ಪುಮಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡುತ್ತಿದ್ದಂತೆ ಅಪಘಾತಕ್ಕೀಡಾಗಿ ಬ್ರಿಗೇಡಿಯರ್ ಸೇರಿದಂತೆ ಇಬ್ಬರು ಸೈನಿಕರು, ಕ್ಯಾಮರಾಮೆನ್ ಸೇರಿದಂತೆ ನಾಲ್ವರು ಸತ್ತಿದ್ದರು. ಅಧ್ಯಕ್ಷರ ವಕ್ತಾರ ರಷೀದ್ ಖುರೇಷಿ ಸೇರಿದಂತೆ ಇನ್ನೂ ನಾಲ್ವರು ಹೆಲಿಕಾಪ್ಟರ್ ಹೊರಗೆ ಜಿಗಿದು ಗಾಯಗೊಂಡಿದ್ದರು.
ಮುಜಫರಾಬಾದ್‌ನಲ್ಲಿ ಸಂಭವಿಸಿದ ಭೂಕಂಪದ ಎರಡನೆ ವಾರ್ಷಿಕ ಸ್ಮರಣೆ ಸಲುವಾಗಿ ಅಲ್ಲಿಗೆ ಭೇಟಿ ನೀಡಲು ಹೊರಟಿದ್ದ ಮುಷರ್ರಫ್ ಇನ್ನೊಂದು ಹೆಲಿಕಾಪ್ಟರ್‌ನಲ್ಲಿದ್ದರು.
|