ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಖಲೀದಾ ಬ್ಯಾಂಕ್ ಖಾತೆ ವಶ
ಗ್ಯಾಟ್ಕೊ ಸರಕು ನಿರ್ವಹಣೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಮಂತ್ರಿ ಖಲೀದಾ ಜಿಯಾ ಬ್ಯಾಂಕ್ ಖಾತೆಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಲು ನಗರ ಕೋರ್ಟೊಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಅವಕಾಶ ನೀಡಿದೆ.

ಭ್ರಷ್ಟಾಚಾರ ನಿಗ್ರಹ ದಳದ ಉಪ ನಿರ್ದೇಶಕ ಜೋಹಿರುಲ್ ಹೂಡಾ ಅವರು ಬ್ಯಾಂಕ್ ಖಾತೆಯ ಎಲ್ಲ ದಾಖಲೆಗಳನ್ನು ವಶಪಡಿಸಿಕೊಳ್ಳಲು ಅವಕಾಶ ನೀಡಬೇಕೆಂದು ಅರ್ಜಿ ಸಲ್ಲಿಸಿದ ಬಳಿಕ ಮೆಟ್ರೋಪಾಲಿಟನ್ ಸೆಷನ್ಸ್ ಕೋರ್ಟ್ ಈ ಆದೇಶ ನೀಡಿತು.

ಢಾಕಾ ಒಳಪ್ರದೇಶ ಸಾರಿಗೆ ಡಿಪೊ ಮತ್ತು ಚಿತ್ತಗಾಂಗ್ ಬಂದರು ಐಸಿಡಿ ಯಾರ್ಡ್‌ನಲ್ಲಿ ಸರಕು ನಿರ್ವಹಣೆಗೆ ಗ್ಯಾಟ್ಕೊ ಕಂಪನಿಗೆ ಅಕ್ರಮವಾಗಿ ಗುತ್ತಿಗೆ ನೀಡಲಾಗಿದೆಯೆಂದು ಖಲೀದ, ಅವರ ಪುತ್ರ ಅರಾಫತ್ ರಹ್ಮಾನ್ ಕೊಕೊ ಮತ್ತು ಇನ್ನೂ 11 ಮಂದಿ ವಿರುದ್ಧ ಎಸಿಸಿ ಪ್ರಕರಣ ದಾಖಲಿಸಿಕೊಂಡಿತ್ತು.

ಆರೋಪಿಗಳು ಟೆಂಡರ್ ಷರತ್ತುಗಳನ್ನು ಉಲ್ಲಂಘಿಸಿ ಬಂದರುಗಳಲ್ಲಿ ಸರಕು ನಿರ್ವಹಿಸಲು ಗ್ಯಾಟ್ಕೊಗೆ ಅನುಭವ ಮತ್ತು ಕೌಶಲ್ಯದ ಕೊರತೆಯಿದ್ದರೂ ಅದನ್ನು ನಿರ್ಲಕ್ಷಿಸಿ ನೇಮಕ ಮಾಡಿಕೊಳ್ಳಲಾಯಿತೆಂದು ಆರೋಪಿಸಲಾಗಿದೆ.

ಗ್ಯಾಟ್ಕೊಗೆ ಗುತ್ತಿಗೆ ನೀಡುವುದಕ್ಕೆ ಸಂಬಂಧಿಸಿದಂತೆ ಯಾವುದೇ ಹಣ ಸಂದಾಯವಾಗಿದೆಯೇ ಎಂದು ದಾಖಲೆಗಳ ಪರಿಶೀಲನೆಗೆ ಎಸಿಸಿ ಬಯಸಿತ್ತೆಂದು ಮೂಲಗಳು ಹೇಳಿವೆ.
ಮತ್ತಷ್ಟು
ಬಾಂಗ್ಲಾ:ದೋಣಿ ಮುಳುಗಿ 33 ಸಾವು
ಮುಷರ್ರಫ್ ಸುರಕ್ಷತೆ ಆತಂಕ
ಹೆಲಿಕಾಪ್ಟರ್ ಅಪಘಾತ: ನಾಲ್ವರ ಸಾವು
ಭಾರತ, ಪಾಕ್‌ನಲ್ಲಿ ರಾಜಕೀಯ ಸ್ಥಿತ್ಯಂತರ: ಪಾಕ್ ಜ್ಯೋತಿಷಿ
ಚೀನಾ ಟೈಪೂನ್, 1 ಮಿಲಿಯ, ಜನರ, ಸ್ಥಳಾಂತರ
ತನ್ನ ಗೆಲುವನ್ನು, ಸ್ವೀಕರಿಸಿ, ವಿರೋಧ ಪಕ್ಷಗಳಿಗೆ, ಮುಷರಫ್ ಕರೆ