ಸ್ಥಳೀಯ ಪೊಲೀಸ್ ಮುಖ್ಯಸ್ಥ ಮತ್ತು ಅಲ್ ಕೈದಾ ವಿರುದ್ಧ ಅಮೆರಿಕದ ಪಡೆಗಳಿಗೆ ಸಹಕರಿಸುತ್ತಿದ್ದ ಪ್ರಮುಖ ಸುನ್ನಿ ಶೇಖ್ ಅವರ ಹತ್ಯೆ ಸಲುವಾಗಿ ಇಬ್ಬರು ಆತ್ಮಹತ್ಯೆ ಕಾರ್‌ಬಾಂಬರ್‌ಗಳು ದಾಳಿ ನಡೆಸಿದಾಗ ಕನಿಷ್ಠ 18 ಜನರು ಮಂಗಳವಾರ ಸತ್ತಿದ್ದಾರೆ.
ಏಕಕಾಲದಲ್ಲಿ ನಡೆದ ದಾಳಿಗಳು ಇತ್ತೀಚಿನ ದೀನಗಳಲ್ಲಿ ಅತ್ಯಂತ ಭೀಕರವೆಂದು ಹೇಳಲಾಗಿದೆ.ಇಸ್ಲಾಂ ಪವಿತ್ರ ತಿಂಗಳ ಕೊನೆ ಸಮೀಪಿಸುತ್ತಿದ್ದಂತೆ ರಮ್ಜಾನ್ ದಾಳಿಯನ್ನು ಭಯೋತ್ಪಾದನಾ ಜಾಲ ತೀವ್ರಗೊಳಿಸಿದೆ. ನಿಲ್ಲಿಸಿದ್ದ ಕಾರ್ ಬಾಂಬ್‌ಗಳು ಕೂಡ ಸ್ಫೋಟಗೊಂಡು ಬಾಗ್ದಾದನ್ನು ತಲ್ಲಣಗೊಳಿಸಿದವಲ್ಲದೇ ಇರಾಕ್‌ನಾದ್ಯಂತ ವಿಧ್ವಂಸಕಾರಿ ಕೃತ್ಯಗಳಿಗೆ ಒಟ್ಟು 42 ಜನರು ಬಲಿಯಾದರು.
ಬಾಗ್ದಾದ್‌ಗೆ 250 ಕಿಮೀ ದೂರದ ತೈಲದ ನೆಲೆಯಾದ ಬೈಜಿಯಲ್ಲಿ ದಾಳಿಕೋರರು ಸ್ಫೋಟಕ ತುಂಬಿದ ಮಿನಿಬಸ್ಸೊಂದನ್ನು ಸ್ಥಳೀಯ ಪೊಲೀಸ್ ಮುಖ್ಯಸ್ಥರ ಮನೆಯೊಳಗೆ ಚಾಲನೆ ಮಾಡಿದರು ಮತ್ತು ಸ್ಫೋಟಕ ತುಂಬಿದ ಟೊಯೊಟಾ ಲ್ಯಾಂಡ್ ಕ್ರೂಸರ್ ವಾಹನವನ್ನು ಸ್ಥಳೀಯ ಜಾಗೃತಿ ಮಂಡಳಿ ಸದಸ್ಯರೊಬ್ಬರ ಮನೆಯ ಹೊರಗೆ ಸ್ಫೋಟಿಸಿದರು.
ಪೊಲೀಸ್ ಮುಖ್ಯಸ್ಥರ ಮನೆಯಿಂದ 100 ಮೀ. ದೂರದಲ್ಲಿದ್ದ ಸನ್ನಿ ಮಸೀದಿಯೊಂದು ಬಾಂಬ್ ಸ್ಫೋಟದಿಂದ ತೀವ್ರ ಹಾನಿಗೊಳಗಾಗಿದೆ ಮತ್ತು ಅದರ ಮೂವರು ಕಾವಲುಗಾರರು ಸತ್ತಿದ್ದಾರೆಂದು ಪೊಲೀಸರು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ.
|