ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಪಾಕ್ ಬಾಂಬ್ ದಾಳಿ:20 ಮಂದಿಗೆ ಗಾಯ
ವಾಯುವ್ಯ ಪಾಕಿಸ್ತಾನದ ಪೇಶಾವರ್ ಜನನಿಬಿಡ ಸಿಡಿ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮವಾಗಿ ಕನಿಷ್ಟ 20 ಜನರು ಗಾಯಗೊಂಡಿದ್ದಾರೆ.

ವಾಯುವ್ಯ ಗಡಿ ಪ್ರಾಂತ್ಯದ ರಾಜಧಾನಿ ನಿಶ್ತಾರ್ ಅಬಾದ್‌ನಲ್ಲಿರುವ ಸಿಡಿ ಮಾರುಕಟ್ಟೆಯು ಸಂಪೂರ್ಣ ನಾಶವಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಗಾಯಗೊಂಡ 20 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐವರು ಸ್ಥಿತಿಯು ಅತ್ಯಂತ ಗಂಭೀರವಾಗಿದೆ ಎಂದು ಸ್ಥಳೀಯ ಆಸ್ಪತ್ರೆಯ ತುರ್ತು ವಿಭಾಗದ ವೈದ್ಯರು ತಿಳಿಸಿದ್ದಾರೆ.

ಈ ಬಾಂಬ್‌ನನಲ್ಲಿ ನಾಲ್ಕು ಕಿಲೋಗ್ರಾಮ್ ಸ್ಫೋಟಕವನ್ನು ಬಳಸಲಾಗಿತ್ತು. ಈ ಸಾಧನವನ್ನು ತಂಪು ನೀರಿನಲ್ಲಿಟ್ಟು, ಟೈಮರ್ ಸಾಧನವನ್ನು ಇದಕ್ಕೆ ಹೊಂದಿಸಲಾಗಿತ್ತು ಎಂದು ಪೊಲೀಸ್ ಮುಖ್ಯಸ್ಥ ಅಬ್ದುಲ್ ಮಜೀದ್ ತಿಳಿಸಿದ್ದಾರೆ.

ಆ ಸ್ಫೋಟಕ್ಕೆ ಯಾವುದೇ ಸಂಘಟನೆಯು ತಾನು ಕಾರಣ ಅಲ್ಲ ಎಂದು ತಿಳಿಸಿದೆ.
ಮತ್ತಷ್ಟು
ಕಾರ್ ಬಾಂಬರ್ ದಾಳಿ: 18 ಸಾವು
ಭುಟ್ಟೊ ಪೂರ್ವಭಾವಿ ಜಾಮೀನು ಅರ್ಜಿ ವಜಾ
ಖಲೀದಾ ಬ್ಯಾಂಕ್ ಖಾತೆ ವಶ
ಬಾಂಗ್ಲಾ:ದೋಣಿ ಮುಳುಗಿ 33 ಸಾವು
ಮುಷರ್ರಫ್ ಸುರಕ್ಷತೆ ಆತಂಕ
ಹೆಲಿಕಾಪ್ಟರ್ ಅಪಘಾತ: ನಾಲ್ವರ ಸಾವು