ದುಬೈನ ದೇರಾದಲ್ಲಿ ವಿನಿಮಯ ಕೇಂದ್ರವೊಂದರ ಮುಖಾಂತರ 1.7 ದಶಲಕ್ಷ ಭಾರತದ ನಕಲಿ ರೂಪಾಯಿಗಳನ್ನು ವಿನಿಮಯ ಮಾಡಿದ ಸೌದಿಯ ಹೂಡಿಕೆದಾರ ಮತ್ತು ಅವರ ಈಜಿಪ್ಟಿನ ಸಹಚರ ಎಂಜಿನಿಯರನ್ನು ಜೈಲಿಗೆ ಹಾಕಲಾಗಿದೆ.
47 ವರ್ಷದ ಹೂಡಿಕೆದಾರನಿಗೆ ದುಬೈ ಕೋರ್ಟ್ 6 ತಿಂಗಳ ಜೈಲು ಮತ್ತು 58 ವರ್ಷ ವಯಸ್ಸಿನ ಈಜಿಪ್ಟಿನ ಸಹಚರನಿಗೆ ಮೂರು ತಿಂಗಳ ಸೆರೆವಾಸವನ್ನು ವಿಧಿಸಿದೆ. ವಿನಿಮಯ ಕೇಂದ್ರವನ್ನು ವಂಚಿಸಿ 143,000 ದಿಹ್ರಾಮ್‌ಗಳನ್ನು ಅಕ್ರಮವಾಗಿ ಪಡೆದಿದ್ದಾರೆಂದು ಪಬ್ಲಿಕ್ ಪ್ರಾಸಿಕ್ಯೂಷನ್ ಆರೋಪಿಸಿದೆ.
ಈಜಿಪ್ಟಿನ ಸಹಚರ ತಮ್ಮನ್ನು ಸಂಪರ್ಕಿಸಿ ಭಾರತದ ರೂಪಾಯಿಯನ್ನು ದಿಹ್ರಾಮ್‌ಗೆ ಪರಿವರಿರ್ತಿಸುವಂತೆ ಕೋರಿದನೆಂದು ವಿನಿಯಮ ಕೇಂದ್ರದ ನೌಕರ ಕೋರ್ಟ್‌ಗೆ ತಿಳಿಸಿದನು. ನಾನು ಭಾರತದ ರೂಪಾಯಿಗಳನ್ನು ಇನ್ನೊಂದು ವಿನಿಮಯ ಕೇಂದ್ರದಲ್ಲಿ ದಿಹ್ರಾಮ್‌ಗೆ ಪರಿವರ್ತಿಸಿದೆ.
ಅವು ನಕಲಿ ನೋಟುಗಳೆಂದು ಮ್ಯಾನೇಜರ್ ಮಾಹಿತಿ ನೀಡಿದ ಬಳಿಕ ನಾನು ಕರೆ ಮಾಡಿ ಹಣ ಹಿಂತಿರುಗಿಸುವಂತೆ ಕೇಳಿದೆ. ಎಂಜಿನಿಯರ್ 77,500 ದಿಹ್ರಾಮ್ ಹಿಂತಿರುಗಿಸಿ ಬಾಕಿ ಹಣವನ್ನು ವಾಪಸು ಮಾಡುವುದಾಗಿ ಭರವಸೆ ನೀಡಿದ ಎಂದು ನೌಕರ ವಿಚಾರಣೆಯಲ್ಲಿ ತಿಳಿಸಿದ್ದಾನೆ. ನೌಕರ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಅವರಿಬ್ಬರನ್ನು ಬಂಧಿಸಲಾಗಿತ್ತು.
|