ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿತನವನ್ನು ಪ್ರಶ್ನಿಸಿ ಸಲ್ಲಿಸಿರುವ ದೂರಿನ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡುವವರೆಗೆ ತಾನು ಅಧ್ಯಕ್ಷನಾಗಿ ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ಪಾಕಿಸ್ತಾನ ಅದ್ಯಕ್ಷ ಪರ್ವೇಜ್ ಮುಷರಫ್ ಹೇಳಿದ್ದಾರೆ.
ಅಕ್ಟೋಬರ್ 17ರಂದು ಮುಂದಿನ ವಿಚಾರಣೆಯ ತನಕ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಬಾರದು ಎಂಬ ನ್ಯಾಯಾಲಯದ ಆದೇಶವು ಮುಂದುವರಿದರೆ ನಾನು ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ಪಾಕಿಸ್ತಾನ ಖಾಸಗಿ ಟಿವಿ ಚಾನೆಲ್‌ವೊಂದರಲ್ಲಿ ಅವರು ಹೇಳಿದ್ದಾರೆ.
ನಿಗದಿತ ವೇಳಾಪಟ್ಟಿಯಂತೆ ಅಧ್ಯಕ್ಷೀಯ ಚುನಾವಣೆಯನ್ನು ನಡೆಸಲು ಸುಪ್ರೀಮ್ ಕೋರ್ಟ್ ಕಳೆದ ವಾರ ಸರಕಾರಕ್ಕೆ ಅನುಮತಿ ನೀಡಿತ್ತು ಮತ್ತು ಅದರಲ್ಲಿ ನಿರೀಕ್ಷೆಯಂತೆ ಮುಷರಫ್ ಅವರು ಗೆಲುವು ಸಾಧಿಸಿದ್ದರು.
ಪಾಕಿಸ್ತಾನ ಪೀಪಲ್ ಪಕ್ಷವು ಅಧ್ಯಕ್ಷೀಯ ಚುನಾವಣೆಗೆ ಮತದಾನ ಮಾಡದಿರುವುದು ಋಣಾತ್ಮಕ ಎಂದಿರುವ ಅವರು, ಅಸೆಂಬ್ಲಿಗೆ ರಾಜೀನಾಮೆ ನೀಡದಿರುವುದು ಧನಾತ್ಮಕ ಎಂದಿದ್ದಾರೆ.
|