ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
49 ಹತ್ಯೆಮಾಡಿದ ನರಹಂತಕನ ಸೆರೆ
"ಮೊದಲ ಹತ್ಯೆಯು ಮೊದಲ ಬಾರಿಗೆ ಪ್ರೇಮಾಂಕುರವಾದಂತೆ ಮರೆಯಲಾಗದ ಅನುಭವ. ಅದು ಮನಸ್ಸಿನ ಮೇಲೆ ಅಚ್ಚಳಿಯದ ಮುದ್ರೆ ಒತ್ತಿತು. ಸುಮಾರು 14 ವರ್ಷಗಳವರೆಗೆ ನಾನು ಬಯಸಿದ್ದನ್ನೆಲ್ಲ ಮಾಡಿದೆ" ಸುಮಾರು 49 ಹತ್ಯೆಗಳನ್ನು ಮಾಡಿದ ಮೂರು ಹತ್ಯೆ ಯತ್ನಗಳಲ್ಲಿ ಭಾಗಿಯಾದ ರಷ್ಯಾದ ಸರಣಿ ನರಹಂತಕ ಅಲೆಕ್ಸಾಂಡರ್ ಪಿಚುಸ್ಕಿನ್ ಮಂಗಳವಾರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.

ಕಾಲ್ಪನಿಕ ಚೆಸ್‌ಬೋರ್ಡ್‌ನ ಚೌಕಗಳ ಸಂಖ್ಯೆಯಾದ 64 ಹತ್ಯೆಗಳನ್ನು ಮಾಡಲು ಹಂತಕ ಯೋಜಿಸಿದ್ದ. ಆದರೆ ತನ್ನ ಗುರಿಗಿಂತ ಒಂದು ಹತ್ಯೆ ಕಡಿಮೆಯಾಗಿರುವುದಾಗಿ ಹಂತಕ ಹೇಳಿಕೊಂಡಿದ್ದಾನೆ. 52 ಪ್ರಕರಣಗಳಲ್ಲಿ ನನ್ನ ವಿರುದ್ಧ ಆರೋಪ ಹೊರಿಸಲಾಗಿದೆ. ಉಳಿದ 11 ಪ್ರಕರಣಗಳನ್ನು ಮರೆಯುವುದು ಸರಿಯಲ್ಲ ಎಂದು ನ್ಯಾಯಾಲಯದ ಕಟಕಟೆಯಲ್ಲಿ ಅವನು ಹೇಳಿದ್ದಾನೆ.

ಪ್ರಕರಣದಲ್ಲಿ ಪಟ್ಟಿ ಮಾಡಿರುವ ಮೃತರ ಬಗ್ಗೆ ಮಾತ್ರ ಸಾಕ್ಷ್ಯ ಸಿಕ್ಕಿದೆ ಎಂದು ನ್ಯಾಯಾಧೀಶರು ನುಡಿದಾಗ, ಹಾಗಾದರೆ ದೇಹಗಳು ಸಿಕ್ಕಿದ್ದರೂ 63 ಪ್ರಕರಣಗಳು ನಿಮ್ಮ ಆಸಕ್ತಿಯನ್ನು ಕೆರಳಿಸಿಲ್ಲವೇ ಎಂದು ಹಂತಕ ಪ್ರಶ್ನಿಸಿದ.

ತನ್ನ ಬಲಿಪಶುಗಳನ್ನು ಪಿಚುಶ್ಕಿನ್ ಮಾಸ್ಕೊನ ಬಿಟ್ಸಾ ಪಾರ್ಕ್‌ನ ಅರಣ್ಯ ಪ್ರದೇಶದಲ್ಲಿ 2001 ಮತ್ತು 2006ರ ನಡುವೆ ಹತ್ಯೆ ಮಾಡಿದ್ದ. ತನ್ನ ಮೊದಲ ನರಬಲಿಯನ್ನು ನೆನಪಿಸಿಕೊಂಡ ಹಂತಕ 19 ವರ್ಷದ ಸಹಪಾಠಿಯ ಕುತ್ತಿಗೆ ಹಿಚುಕಿ ಬಾವಿಯೊಳಗೆ ಎಸೆದಿದ್ದಾಗಿ ಹೇಳಿಕೊಂಡಿದ್ದಾನೆ. ಪಿಚುಶ್ಕಿನ್ ಮತ್ತು ಅವನ ಸಹಚರ ಇಬ್ಬರೂ ಸೇರಿಕೊಂಡು ಪರಿಚಯಸ್ಥನೊಬ್ಬನನ್ನು ಹತ್ಯೆಮಾಡಲು ಯೋಜಿಸಿದರು.

ಆದರೆ ತನ್ನ ಸಹಚರನ ಅಸಾಮರ್ಥ್ಯವನ್ನು ಮನಗಂಡ ಪಿಚುಸ್ಕಿನ್ ಸಹಚರನನ್ನು ಬಿಟ್ಟು ಸ್ವತಃ ತಾನೇ ಕೊಲೆ ಮಾಡಿದ. ಅವನಿಗೆ ಇದೊಂದು ಆಟವಾಗಿತ್ತು. ಆದರೆ ನನಗೆ ಆಟವಾಗಿರಲಿಲ್ಲ. ಎಲ್ಲರೂ ಕೊಲೆ ಮಾಡುವ ಸಾಮರ್ಥ್ಯ ಹೊಂದಿರುವುದಿಲ್ಲ. ಅವನು ನನಗೆ ಸಹಚರನಾಗಲು ಯೋಗ್ಯನಲ್ಲ ಎಂದು ಮನಗಂಡು ಅವನ ಹತ್ಯೆಗೆ ಕೂಡ ನಿರ್ಧರಿಸಿದೆ ಎಂದು ಹೇಳಿದ್ದಾನೆಂದು ನೊವೋಸ್ತಿ ವರದಿ ಮಾಡಿದೆ.

ತನ್ನ ಕೊನೆಯ ಬಲಿಪಶುವನ್ನು ಮುಗಿಸಿ ಆಕೆಯ ದೇಹವನ್ನು ಉದ್ಯಾನದಲ್ಲಿರುವ ಹರಿಯುವ ನೀರಿನ ತೊರೆಯಲ್ಲಿ ಬಿಸಾಡಿದ 11 ದಿನಗಳ ಬಳಿಕ ಪಿಚುಶ್ಕಿನ್‌ನನ್ನು ಬಿಟ್ಸಾ ಪಾರ್ಕ್‌ನಲ್ಲಿ 2006 ಜೂನ್ 16ರಂದು ಬಂಧಿಸಲಾಯಿತು.
ಮತ್ತಷ್ಟು
ತೀರ್ಪಿನ ನಂತರವೇ ಪ್ರಮಾಣವಚನ:ಮುಷರಫ್
ನಕಲಿ ನೋಟು ವಿನಿಮಯ:ಇಬ್ಬರ ಬಂಧನ
ಪಾಕ್ ಬಾಂಬ್ ದಾಳಿ:20 ಮಂದಿಗೆ ಗಾಯ
ಕಾರ್ ಬಾಂಬರ್ ದಾಳಿ: 18 ಸಾವು
ಭುಟ್ಟೊ ಪೂರ್ವಭಾವಿ ಜಾಮೀನು ಅರ್ಜಿ ವಜಾ
ಖಲೀದಾ ಬ್ಯಾಂಕ್ ಖಾತೆ ವಶ