ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದ ದೂರಿನ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡುವವರೆಗೆ ಮಾಜಿ ಪ್ರಧಾನಮಂತ್ರಿ ಭೆನಜೀರ್ ಭುಟ್ಟೋ ಅವರು ಸ್ವಯಂಗಡಿಪಾರಿನಿಂದ ಹಿಂತಿರುಗದಂತೆ ಮುಷರಫ್ ಕರೆ ನೀಡಿದ್ದಾರೆ.
ಭುಟ್ಟೋ ಅವರು ಅಕ್ಟೋಬರ್ 18ರಂದು ಪಾಕಿಸ್ತಾನಕ್ಕೆ ಹಿಂತಿರುಗಬಾರದು ಮತ್ತು ಸುಪ್ರೀಮ್ ಕೋರ್ಟ್ ತೀರ್ಪು ನೀಡುವವರೆಗೆ ತನ್ನ ಮರಳುವಿಕೆಯನ್ನು ಮುಂದಕ್ಕೆ ಹಾಕಬೇಕು ಎಂದು ಎಆರ್‌ವೈ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮುಷರಫ್ ಹೇಳಿದ್ದಾರೆ.
ಅಧ್ಯಕ್ಷೀಯ ಚುನಾವಣೆಯ ತನ್ನ ಅಭ್ಯರ್ಥಿತನವನ್ನು ಪ್ರಶ್ನಿಸಿ ಸಲ್ಲಿಸಿರುವ ದೂರಿನ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡುವವರೆಗೆ ತಾನು ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ಮುಷರಫ್ ಹೇಳಿದ್ದಾರೆ.
ಅಧಿಕಾರ ಹಂಚಿಕೆ ಒಪ್ಪಂದದ ಅಡಿಯಲ್ಲಿ ಭುಟ್ಟೋ ಪಾಕಿಸ್ತಾನಕ್ಕೆ ಮರಳುವಿಕೆಗೆ ದಾರಿ ಮಾಡಲು, ಅಧ್ಯಕ್ಷೀಯ ಚುನಾವಣೆಯ ಮುನ್ನಾದಿನ, 1986 ಮತ್ತು 1999ರ ನಡುವೆ ಭುಟ್ಟೋ ಮತ್ತು ಇತರ ರಾಜಕಾರಣಿಗಳ ವಿರುದ್ಧ ದಾಖಲಾಗಿದ್ದ ಭೃಷ್ಟಾಚಾರದ ಕೇಸುಗಳನ್ನು ಪಾಕಿಸ್ತಾನ ಸರಕಾರ ಸುಗ್ರೀವಾಜ್ಞೆಯು ರದ್ದುಗೊಳಿಸಿತ್ತು
ಭುಟ್ಟೋ ಅಕ್ಟೋಬರ್ 18ರಂದು ಪಾಕಿಸ್ತಾನಕ್ಕೆ ಮರಳಲು ನಿರ್ಧರಿಸಿದ್ದು, ಇದರಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ ಎಂದು ಪಾಕಿಸ್ತಾನ ಪೀಪಲ್ ಪಕ್ಷವು ಹೇಳಿದೆ.
|