ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಶ್ರೀಲಂಕಾದಲ್ಲಿ ಶಸ್ತ್ರಾಸ್ತ್ರ ವ್ಯಾಪಾರಕ್ಕೆ ನಿಷೇಧ
ಶ್ರೀಲಂಕಾ ಜನತೆಯು ದೇಶದಲ್ಲಿ ಅಥವಾ ವಿದೇಶದಲ್ಲಿ ಯಾವುದೇ ಶಸ್ತ್ರಾಸ್ತ್ರ ವ್ಯಾಪಾರದಲ್ಲಿ ಭಾಗಿಯಾಗದಂತೆ ಶ್ರೀಲಂಕಾ ಸರಕಾರವು ನಿಷೇಧ ಹೇರಿದೆ.

ಶ್ರೀಲಂಕಾವು ದೇಶ ಅಥವಾ ಹೊರದೇಶದೊಂದಿಗೆ ಶಸ್ತ್ರಾಸ್ತ್ರ ವ್ಯಾಪಾರ ಮಾಡುವುದನ್ನು ತಪ್ಪಿಸುವ ಸಲುವಾಗಿ, ತುರ್ತು ನಿಯಮದಡಿಯಲ್ಲಿ ವಿಶೇಷ ಕಾನೂನನ್ನು ಸರಕಾರವು ಪ್ರಕಟಿಸುವಂತೆ ನೂತನ ನೇಮಕಗೊಂಡ ಎಮ್‌ಪಿ ಬಸೀಲ್ ರಾಜಪಕ್ಷ ಅವರು ಸಂಸತ್ತಿಗೆ ಸೂಚಿಸಿದ್ದಾರೆ.

ತುರ್ತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ನಿಯಮಾವಳಿಯನ್ನು ಮಸೂದೆಯನ್ನಾಗಿ ಪರಿವರ್ತಿಸಲು ಸರಕಾರ ಬದ್ಧವಾಗಿದ್ದು, ನಿಯಮಾವಳಿ ಪ್ರಕಾರ ಶ್ರೀಲಂಕಾದ ಯಾವುದೇ ನಾಗರಿಕ ಇನ್ನು ಮುಂದೆ ಶಸ್ತ್ರಾಸ್ತ್ರ ವಹಿವಾಟಿನಲ್ಲಿ ತೊಡಗುವಂತಿಲ್ಲ ಎಂದು ಹೇಳಿದ್ದಾರೆ.

ಶ್ರೀಲಂಕಾದ ಯಾವುದೇ ಪ್ರಜೆಯು ಶಸ್ತ್ರಾಸ್ತ್ರ ಪೂರೈಕೆಯಲ್ಲಿ ಮಧ್ಯವರ್ತಿಯಾಗುವುದನ್ನೂ ಈ ನಿಯಮವು ನಿಷೇಧಿಸುತ್ತದೆ ಮತ್ತು ನಿಯಮ ಉಲ್ಲಂಘಿಸಿದವರಿಗೆ ಕಾನೂನು ಕ್ರಮ ಕೈಗೊಳ್ಳಲು ಈ ನಿಯಮ ಅನುಮತಿ ನೀಡುತ್ತದೆ ಎಂದು ಅವರು ಹೇಳಿದರು.

ಮತ್ತಷ್ಟು
ಮರಳುವಿಕೆಯನ್ನು ಮುಂದೂಡಲು ಮುಷರಫ್ ಒತ್ತಾಯ
ಮಕ್ಕಳ ಬಗ್ಗೆ ಪ್ರೀತಿಯಿಲ್ಲದ ಬ್ರಿಟ್ನಿ
49 ಹತ್ಯೆಮಾಡಿದ ನರಹಂತಕನ ಸೆರೆ
ತೀರ್ಪಿನ ನಂತರವೇ ಪ್ರಮಾಣವಚನ:ಮುಷರಫ್
ನಕಲಿ ನೋಟು ವಿನಿಮಯ:ಇಬ್ಬರ ಬಂಧನ
ಪಾಕ್ ಬಾಂಬ್ ದಾಳಿ:20 ಮಂದಿಗೆ ಗಾಯ