ನೇಪಾಳದಲ್ಲಿನ ಅಸೆಂಬ್ಲಿ ಚುನಾವಣೆಯ ನೂತನ ದಿನಾಂಕವನ್ನು ಶೀಘ್ರದಲ್ಲೇ ನಿಗದಿಪಡಿಸುವ ನಿರೀಕ್ಷೆಯನ್ನು ಹೊಂದಿದ್ದೇನೆ ಎಂದು ಮಾಜಿ ವಿದೇಶಿ ಕಾರ್ಯದರ್ಶಿ ಶ್ಯಾಮ್ ಸರನ್ ಹೇಳಿದ್ದಾರೆ.
ಈ ಚುನಾವಣೆಯು ನೇಪಾಳದಲ್ಲಿರುವ ರಾಜಕೀಯ ಜಗಳವನ್ನು ಕೊನೆಗೊಳಿಸಲಿದೆ ಎಂದು ಬುಧವಾರ ಕಾಟ್ಮಂಡ್‌ಗೆ ಆಗಮಿಸಿದ್ದ ಸರನ್ ಹೇಳಿದರು.
ನೇಪಾಳದ ರಾಜಕೀಯ ಪಕ್ಷಗಳು ಆದಷ್ಟು ಬೇಗನೆ ಚುನಾವಣೆಯ ದಿನಾಂಕವನ್ನು ನಿಗದಿಪಡಿಸಿ ಅಸೆಂಬ್ಲಿ ಚುನಾವಣೆಯನ್ನು ನಡೆಸಿದರೆ ಪ್ರಸಕ್ತ ರಾಜಕೀಯ ಬಿಕ್ಕಟ್ಟುಗಳು ಶಮನಗೊಳ್ಳುವ ನಂಬಿಕೆಯನ್ನು ಬಾರತವು ಹೊಂದಿದೆ ಎಂದು ಅವರು ತಿಳಿಸಿದರು.
ಇತ್ತೀಚಿನ ರಾಜಕೀಯ ಬೆಳವಣಿಗೆ ಮತ್ತು ದ್ವಿಪಕ್ಷೀಯ ವಿಷಯಗಳ ಬಗ್ಗೆ ಭಾರತೀಯ ರಾಯಭಾರಿಗಳು ಚರ್ಚೆ ನಡೆಸಿದ್ದಾರೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಶಾಂತಿ ಮತ್ತು ಪುನರ್‌ಸ್ಥಾಪನಾ ಸಚಿವ ರಾಮ್ ಚಂದ್ರ ಪೌದಲ್, ಮಾಜಿ ಪ್ರಧಾನ ಮಂತ್ರಿ ಶೇರ್ ಬಹಾದ್ದೂರ್ ಮತ್ತು ರಾಷ್ಟ್ರೀಯ ಜನಶಕ್ತಿ ಪಕ್ಷದ ಮುಖ್ಯಸ್ಥ ಪಶುಪತಿ ಶುಮ್ಶರ್ ರಾಣಾ ಅವರನ್ನು ಸರನ್ ಅವರು ಗುರುವಾರ ಭೇಟಿ ಮಾಡಲಿದ್ದಾರೆ.
ಸರನ್ ಅವರು ಪ್ರಧಾನಿ ಮಂತ್ರಿ ಗಿರಿಜಾ ಪ್ರಸಾದ್ ಕೊಯಿರಾಲ, ಮಾವೋವಾದಿ ಅಧ್ಯಕ್ಷ ಪ್ರಚಂಡ ಮತ್ತು ಸಿಪಿಎನ್-ಯುಎಮ್ಎಲ್ ಪ್ರಧಾನ ಕಾರ್ಯದರ್ಶಿ ಮಾಧವ ಕುಮಾರ್ ಅವರೊಂದಿಗೆ ಬುಧವಾರ ರಾಜಕೀಯ ಅವ್ಯವಸ್ಥೆಯ ಬಗ್ಗೆ ಮಾತುಕತೆ ನಡೆಸಿ ಶಾಂತಿಯುತ ಪ್ರಕ್ರಿಯೆಗೆ ಭಾರತವು ಸಹಕಾರ ನೀಡುವುದಾಗಿ ಆಶ್ವಾಸನೆ ನೀಡಿದರು.
|