ಆಸ್ಟ್ರೇಲಿಯದ ಕ್ವೀನ್ಸ್‌ಲೆಂಡ್ ಆಸ್ಪತ್ರೆಯಲ್ಲಿ 2003 ಮತ್ತು 2005ರ ನಡುವೆ ತಾನು ಚಿಕಿತ್ಸೆ ನೀಡಿದ 87 ರೋಗಿಗಳ ಸಾವಿಗೆ ಕಾರಣರಾಗಿದ್ದಾರೆಂದು ಆರೋಪಿಸಿರುವ ಭಾರತೀಯ ಸಂಜಾತ ವೈದ್ಯ ಜಯಂತ್ ಪಟೇಲ್ ಅವರನ್ನು ಅಮೆರಿಕದಿಂದ ಹಸ್ತಾಂತರ ಮಾಡಿಕೊಳ್ಳಲು ಆಸ್ಟ್ರೇಲಿಯ ಅಂತಿಮ ಹಂತಗಳ ಪ್ರಯತ್ನದಲ್ಲಿದೆ.
ಆಸ್ಟ್ರೇಲಿಯದಲ್ಲಿ ಡಾ. ಡೆತ್ ಎಂದೇ ಮಾಧ್ಯಮಗಳಿಂದ ನಾಮಾಂಕಿತರಾದ ಪಟೇಲ್ ಕ್ವೀನ್ಸ್‌ಲ್ಯಾಂಡ್‌ನ ಬುಂಡಾಬರ್ಗ್ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದು 2005ರಿಂದೀಚೆಗೆ ಅಮೆರಿಕದಲ್ಲಿ ನೆಲೆಸಿದ್ದಾರೆ. ಆಸ್ಟ್ರೇಲಿಯದ ಅತ್ಯಂತ ನಿರ್ಲಕ್ಷ್ಯದ ವೈದ್ಯಕೀಯ ಹಗರಣವಾದ ಇದರಲ್ಲಿ ಪಟೇಲ್ ತನ್ನ ಅರ್ಜಿಯಲ್ಲಿ ಸುಳ್ಳುದಾಖಲೆಗಳನ್ನು ನೀಡಿ ಆಸ್ಟ್ರೇಲಿಯದಲ್ಲಿ ವೈದ್ಯವೃತ್ತಿ ಕೈಗೊಂಡಿದ್ದನು.
ಬಳಿಕ ಸಾವಿನ ಪ್ರಮಾಣಪತ್ರಗಳನ್ನು ಕೂಡ ತಿದ್ದಿದ್ದಲ್ಲದೇ ತನ್ನ ಹುಳುಕು ಬಯಲಾಗುವುದೆಂದು ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ವರ್ಗ ಮಾಡಲು ನಿರಾಕರಿಸಿದ್ದರು. ಪಟೇಲ್ ಹಸ್ತಾಂತರ ಮಾಡುವ ಬಗ್ಗೆ ಅಮೆರಿಕದ ಕೋರ್ಟ್ ಅಂತಿಮವಾಗಿ ನಿರ್ಧರಿಸಲಿದೆ. ಆದರೆ ಪಟೇಲ್ ಹಸ್ತಾಂತರದ ಅರ್ಜಿ ಕುರಿತು ನಿರ್ಧಾರ ಕೈಗೊಳ್ಳುವ ಮುಂಚೆ ಅಮೆರಿಕ ಅನೇಕ ಹೆಜ್ಜೆಗಳನ್ನು ಇಡಬೇಕಿದೆ.
ಪ್ರಾಸಿಕ್ಯೂಟರ್‌ಗಳು ಪಟೇಲ್ ವಿರುದ್ಧ 16 ಆರೋಪಗಳನ್ನು ಮಾಡಿದ್ದು, ಅದರಲ್ಲಿ ಮಾನವಹತ್ಯೆ ಮೂರು ಆರೋಪಗಳು ಸೇರಿವೆ.
|