ಘರ್ಷಣೆಯಿಂದ ಸಮಸ್ಯೆಯನ್ನು ಬಗೆಹರಿಸಲಾಗುವುದಿಲ್ಲ ಎಂಬುದಾಗಿ ರೆಬೆಲ್‌ಗಳಿಗೆ ಮನವರಿಕೆ ಮಾಡುವ ಮೂಲಕ ಭಯೋತ್ಪಾದನೆಯನ್ನು ನಾಶಮಾಡುತ್ತೇವೆ ಎಂದು ಶ್ರೀಲಂಕಾ ಸೇನೆ ಹೇಳಿದ್ದು, ಎಲ್‌ಟಿಟಿಇ ವಿರುದ್ಧದ ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದೆ.
ಸೇನಾ ಮುಖ್ಯಸ್ಥ ಸರತ್ ಫೋನ್ಸೇಕಾ ಅವರು, ಸೇನಾ ಪ್ರಧಾನ ಕಾರ್ಯಾಲಯದಲ್ಲಿ ನಡೆದ 58ನೇ ಸೇನಾದಿನ ಸಮಾರಂಭದಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ, ಭಯೋತ್ಪಾದನೆಯ ಕಾರ್ಯದಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎಂದು ಸೇನೆಯು ಭಯೋತ್ಪಾದಕರಿಗೆ ಮನವರಿಕೆ ಮಾಡಿ ಭಯೋತ್ಪಾದನೆಯ ನಿರ್ಮೂಲನ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಎಪ್ರಿಲ್ 25ರಂದು ಸೇನಾ ಪ್ರಧಾನ ಕಾರ್ಯಾಲಯದಲ್ಲಿದ್ದ ಬೆಂಗಾವಲು ಪಡೆಗಳ ಮೇಲೆ ಶಂಕಿತ ಎಲ್‌ಟಿಟಿಇ ಉಗ್ರರು ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ ಸಂದರ್ಭದಲ್ಲಿ ಫೋನ್ಸೇಕಾ ಅವರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದರು.
ಮವಿಲಾರಿನಿಂದ ಸಿಲವತ್ತೂರೈವರೆಗೆ ಶ್ರೀಲಂಕಾ ಸೇನೆಯು ಯಶಸ್ವೀ ಕಾರ್ಯಚರಣೆಯನ್ನು ನಡೆಸಿದೆ ಎಂದು ಫೋನ್ಸೇಕಾ ಅವರು ಹೇಳಿದ್ದು, ಮುಂದಿನ ದಿನಗಳಲ್ಲಿ ಸೇನೆ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಲು ಇದು ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.
|