ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್, ಭುಟ್ಟೋ ಅವರು ಪಾಕಿಸ್ತಾನಕ್ಕೆ ಹಿಂದಿರುಗುವುದನ್ನು ಮುಂದೂಡುವಂತೆ ಹೇಳಿದ್ದರೂ, ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಯೋಜನೆಯಂತೆ ಮುಂದಿನವಾರ ಪಾಕಿಸ್ತಾನಕ್ಕೆ ಹಿಂತಿರುಗಲಿದ್ದಾರೆ ಎಂದು ಪಾಕಿಸ್ತಾನ ಪೀಪಲ್ ಪಕ್ಷವು ಗುರುವಾರ ತಿಳಿಸಿದೆ.
ಅಧ್ಯಕ್ಷೀಯ ಚುನಾವಣೆಯ ದೂರಿನ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡುವವರೆಗೆ ಭುಟ್ಟೋ ಪಾಕಿಸ್ತಾನಕ್ಕೆ ಹಿಂತಿರುಗಬಾರದು ಎಂದು ಮುಷರಫ್ ಅವರು ಬುಧವಾರ ಸಂದರ್ಶನವೊಂದರಲ್ಲಿ ಹೇಳಿದ್ದರು.
ಭುಟ್ಟೋ ಅವರು ನಿಗದಿತ ದಿನಾಂಕದಂದೇ ಪಾಕಿಸ್ತಾನಕ್ಕೆ ಹಿಂತಿರುಗಲಿದ್ದಾರೆ, ಇದರಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ ಎಂದು ಪಾಕಿಸ್ತಾನ ಪೀಪಲ್ ಪಾರ್ಟಿಯ ವಕ್ತಾರ ಫರಾತುಲ್ಲಾಹ್ ಬಾಬರ್ ತಿಳಿಸಿದ್ದಾರೆ.
ಮುಷರಫ್ ಮನವಿಯ ಬಗ್ಗೆ ಭುಟ್ಟೋ ಮತ್ತು ಅವರ ಬೆಂಬಲಿಗರು ಗುರುವಾರ ದುಬೈಯಲ್ಲಿ ಮಾತುಕತೆ ನಡೆಸಲಿದ್ದಾರೆ ಎಂಬ ವರದಿಯನ್ನು ಅವರು ತಳ್ಳಿಹಾಕಿದ್ದಾರೆ.
ದುಬೈಯಲ್ಲಿ ಸಭೆ ಸೇರುವುದು ದಿನಚರಿಯಾಗಿದೆ ಎಂದು ಬಾಬರ್ ಅವರು ತಿಳಿಸಿದ್ದಾರೆ.ಭುಟ್ಟೋ ಅವರು ಇಸ್ಲಾಮಿಕ್ ರಾಷ್ಟ್ರಗಳ ಪ್ರಥಮ ಮಹಿಳಾ ಪ್ರಧಾನಿಯಾಗಿದ್ದು, ಅಕ್ಟೋಬರ್ 18ರಂದು ಪಾಕಿಸ್ತಾನಕ್ಕೆ ಹಿಂತಿರುಗಲಿದ್ದಾರೆ.
|