ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಟರ್ಕಿ-ಅಮೆರಿಕ ಹಳಸಿದ ಸಂಬಂಧ: ರಾಯಭಾರಿ ಹಿಂದಕ್ಕೆ
ನೂರು ವರ್ಷಗಳ ಹಿಂದೆ ಟರ್ಕ್ ರಾಷ್ಟ್ರೀಯರಿಂದ ನಡೆದ ಅರ್ಮೇನಿಯನ್ ನಾಗರಿಕರ ಹತ್ಯೆಯನ್ನು ಜನಾಂಗೀಯ ಹತ್ಯೆ ಎಂದು ಕಾಂಗ್ರೆಸ್ ಹೇಳಿರುವುದನ್ನು ಖಂಡಿಸಿರುವ ಟರ್ಕಿ, ತನ್ನ ರಾಯಭಾರಿಯನ್ನು ವಾಷಿಂಗ್ಟನ್‌ನಿಂದ ಹಿಂದಕ್ಕೆ ಕರೆಸಿಕೊಂಡಿದೆ.

ರಾಯಭಾರಿಯ ಹಿಂದಕ್ಕೆ ಕರೆಸುವ ಪ್ರಯತ್ನವು ದೀರ್ಘಕಾಲೀನ ಮಿತ್ರರಾಷ್ಟ್ರಗಳ ನಡುವಿನ ಸಂಬಂಧಗಳು ಕ್ಷೀಣಗೊಳ್ಳುವ ಕುರುಹಾಗಿದೆ ಮತ್ತು ಈ ಪ್ರದೇಶದಲ್ಲಿ ಸಂಘರ್ಷ ಉಂಟಾಗುವ ಸಾಧ್ಯತೆಯಿದೆ.

ಇರಾಕ್ ಮತ್ತು ಅಫಘಾನಿಸ್ತಾನದಲ್ಲಿರುವ ಅಮೆರಿಕ ನೆಲೆಗಳಿಗೆ ಹಡಗು ಮೂಲಕ ಸರಕು ಸಾಮಗ್ರಿ ಪೂರೈಸುವ ಮಧ್ಯವರ್ತಿಯಾಗಿರುವ ಟರ್ಕಿಯು, ಈ ಹಿಂತೆಗೆತದಿಂದಾಗಿ ಇನ್ನು ಮುಂದೆ ಅಮೆರಿಕಕ್ಕೆ ನೀಡುವ ಸೈನಿಕ ಸಹಾಯವನ್ನು ನಿಲ್ಲಿಸಬಹುದು ಎಂದು ಟರ್ಕಿ ಪ್ರಧಾನಮಂತ್ರಿ ರಿಸೀಪ್ ತಾಯಿಪ್ ಎರ್ಡೋಗನ್ ಅವರ ಸಹಾಯಕ ಈಗ್‌ಮನ್ ಬೇಗಿಸ್ ತಿಳಿಸಿದ್ದಾರೆ.

ಈ ನಿರ್ಣಯದಿಂದಾಗಿ ಟರ್ಕಿಯು ಟರ್ಕಿಶ್ ಕುರ್ಡ್ ಬಂಡುಕೋರರ ದಮನಕ್ಕೆ ಉತ್ತರ ಇರಾಕಿಗೆ ಪಡೆಗಳನ್ನು ಕಳುಹಿಸಲು ಮುಂದಾಗಬಹುದು ಎಂದು ವಿಶ್ಲೇಷಕರು ತರ್ಕಿಸಿದ್ದಾರೆ. ಈ ಪ್ರದೇಶವು ಇರಾಕಿನ ಶಾಂತಿಯುತ ಮತ್ತು ಸ್ಥಿರವಾದ ಪ್ರದೇಶಗಳಲ್ಲೊಂದಾಗಿದ್ದು, ಟರ್ಕಿಯ ಈ ಯತ್ನವನ್ನು ಅಮೆರಿಕವು ವಿರೋಧಿಸುತ್ತಾ ಬಂದಿತ್ತು.
ಮತ್ತಷ್ಟು
ಮುಷರಫ್ ಮನವಿಯನ್ನು ತಿರಸ್ಕರಿಸಿದ ಭುಟ್ಟೋ
ಭಯೋತ್ಪಾದನೆಯ ನಾಶ:ಶ್ರೀಲಂಕಾ ಸೇನೆ ಭರವಸೆ
ಡಾ. ಡೆತ್ ಹಸ್ತಾಂತರಕ್ಕೆ ಆಸ್ಟ್ರೇಲಿಯ ಯತ್ನ
ನೇಪಾಳದಲ್ಲಿ ಶೀಘ್ರ ಚುನಾವಣೆ:ಭಾರತ ನಿರೀಕ್ಷೆ
ಶ್ರೀಲಂಕಾದಲ್ಲಿ ಶಸ್ತ್ರಾಸ್ತ್ರ ವ್ಯಾಪಾರಕ್ಕೆ ನಿಷೇಧ
ಮರಳುವಿಕೆಯನ್ನು ಮುಂದೂಡಲು ಮುಷರಫ್ ಒತ್ತಾಯ