ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಬುಷ್‌ನಿಂದ ದಲೈಲಾಮ ಖಾಸಗಿ ಭೇಟಿ
ಚೀನಾದ ಕೋಪಕ್ಕೆ ಗುರಿಯಾಗುವ ಸಾಧ್ಯತೆಯ ಹೊರತಾಗಿಯೂ ಟಿಬೆಟಿನ ಗಡೀಪಾರಾದ ಧಾರ್ಮಿಕ ನಾಯಕ ದಲೈ ಲಾಮಾ ಅವರನ್ನು ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರು ಅಕ್ಟೋಬರ್ 16ರಂದು ಖಾಸಗಿಯಾಗಿ ಭೇಟಿಯಾಗಲಿದ್ದಾರೆ ಎಂದು ಶ್ವೇತಭವನ ಮೂಲಗಳು ತಿಳಿಸಿವೆ.

ಮಾಧ್ಯಮಗಳಿಂದ ದೂರ ಉಳಿಯಲು ಬುಷ್ ದಲೈಲಾಮ ಅವರನ್ನು ಶ್ವೇತಭವನದ ಖಾಸಗಿ ವಿಭಾಗದಲ್ಲಿ ಭೇಟಿಯಾಗಲಿದ್ದಾರೆ, ಎಂದು ಶ್ವೇತಭವನ ವಕ್ತಾರ ಗಾರ್ಡನ್ ಜಾನ್‌ಡ್ರೂ ತಿಳಿಸಿದ್ದಾರೆ.ಈ ಹಿಂದೆಯೂ ಅನೇಕ ಬಾರಿ ಅಮೆರಿಕ ಅಧ್ಯಕ್ಷರು ಖಾಸಗಿಯಾಗಿಯೇ ಭೇಟಿ ಮಾಡಿದ್ದರು.

ಸಭೆಯ ಮರುದಿನ ಕಾಪ್ಟನ್ ಹಿಲ್‌ನಲ್ಲಿ ದಲೈಲಾಮಾ ಅವರು ಅಮೆರಿಕ ಕಾಂಗ್ರೆಸ್‌ನಿಂದ ಚಿನ್ನದಪದಕ ಪಡೆಯಲಿದ್ದು, ಬುಷ್ ಈ ಸಮಾರಂಭದಲ್ಲಿ ಬಾಗವಹಿಸಲಿದ್ದಾರೆ.

ಈ ವಿಷಯದ ಬಗ್ಗೆ ಅಮೆರಿಕಕ್ಕೆ ಸೂಕ್ತ ನಿರ್ಧಾರವನ್ನು ಸೂಚಿಸಿದ್ದೆವು ಎಂದು ಖಚಿತಪಡಿಸಿದ ಚೀನಾ, ದಲೈಲಾಮಾ ಅವರಿಗೆ ಅಮೆರಿಕ ಹಿರಿಯ ನಾಗರಿಕ ಪ್ರಶಸ್ತಿ ನೀಡಿರುವ ಬಗ್ಗೆ ಕಠುವಾಗಿ ಟೀಕಿಸಿದೆ.

ಅಮೆರಿಕ ಕಾಂಗ್ರೆಸ್ ದಲೈಲಾಮ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸುವುದನ್ನು ಮತ್ತು ಯಾವುದೇ ದೇಶ ಅಥವಾ ಯಾವುದೇ ವ್ಯಕ್ತಿಯು ಚೀನಾ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಲು ದಲೈಲಾಮ ವಿವಿದವನ್ನು ಬಳಸುವುದನ್ನು ಚೀನಾವು ವಿರೋಧಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಲಿಯೂ ಜಾನ್ಕೋ ತಿಳಿಸಿದ್ದಾರೆ.

ಉನ್ನತ ನೈತಿಕ ಸ್ಥೈರ್ಯ ಪ್ರದರ್ಶಿಸುವವರಿಗೆ ಅಮೆರಿಕ ಕಾಂಗ್ರೆಸ್ ಪ್ರಶಸ್ತಿಯು ಮೀಸಲಾಗಿದ್ದು, ಪೋಪ್ ಜಾನ್ ಪಾಲ್ 2, ಮದರ್ ತೆರೆಸಾ, ನೆಲ್ಸನ್ ಮಂಡೇಲಾ ಮುಂತಾದವರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ.
ಮತ್ತಷ್ಟು
ಟರ್ಕಿ-ಅಮೆರಿಕ ಹಳಸಿದ ಸಂಬಂಧ: ರಾಯಭಾರಿ ಹಿಂದಕ್ಕೆ
ಮುಷರಫ್ ಮನವಿಯನ್ನು ತಿರಸ್ಕರಿಸಿದ ಭುಟ್ಟೋ
ಭಯೋತ್ಪಾದನೆಯ ನಾಶ:ಶ್ರೀಲಂಕಾ ಸೇನೆ ಭರವಸೆ
ಡಾ. ಡೆತ್ ಹಸ್ತಾಂತರಕ್ಕೆ ಆಸ್ಟ್ರೇಲಿಯ ಯತ್ನ
ನೇಪಾಳದಲ್ಲಿ ಶೀಘ್ರ ಚುನಾವಣೆ:ಭಾರತ ನಿರೀಕ್ಷೆ
ಶ್ರೀಲಂಕಾದಲ್ಲಿ ಶಸ್ತ್ರಾಸ್ತ್ರ ವ್ಯಾಪಾರಕ್ಕೆ ನಿಷೇಧ