ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಮೂರು ಮಿಲಿಯನ್ ಡಾಲರ್ ಲಂಚ ಸ್ವೀಕರಿಸಿದ ಸಚಿವರು
ಪ್ರಭಾವೀ ಉದ್ಯಮಿಯೊಬ್ಬರ ಪುತ್ರನನ್ನು ಕೊಲೆ ಕೇಸಿನಿಂದ ಬಿಡುಗಡೆಗೊಳಿಸಲು ಮೂರು ಮಿಲಿಯನ್ ಡಾಲರ್ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಬಾಂಗ್ಲಾದೇಶದ ಮಾಜಿ ಸಚಿವರೊಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಲ್ಪ ಪ್ರಮಾಣದ ಹಣವನ್ನು ಸಚಿವ ಬಾಬರ್ ಅವರ ಮನೆಗೆ ಗೋಣಿಚೀಲದಲ್ಲಿ ಸಾಗಿಸಲಾಗಿದೆ ಎಂದು ಭೃಷ್ಟಾಚಾರ ನಿಗ್ರಹ ಆಯೋಗದ ಉಪ ಸಹಾಯಕ ನಿರ್ದೇಶಕ ಅಬುಲ್ ಕಾಶೇಮ್ ಆರೋಪಿಸಿದ್ದಾರೆ.

ಬಶುಂಧರ ಗ್ರೂಪ್ಸ್ ಅಧ್ಯಕ್ಷರ ಪುತ್ರನನ್ನು ಕೊಲೆಯ ಕೇಸಿನಿಂದ ಬಿಡುಗಡೆಗೊಳಿಸುವುದಕ್ಕಾಗಿ ಮೂರು ಮಿಲಿಯನ್ ಡಾಲರ್ ಲಂಚ ತೆಗೆದುಕೊಳ್ಳುತ್ತಿದ್ದ ಮಾಜಿ ರಾಜ್ಯ ಆಂತರಿಕ ಗೃಹ ಸಚಿವ ಲಟ್ಫೋಜಾನ್ ಬಾಬರ್ ಮತ್ತು ಇತರ ಐದು ಮಂದಿಯ ವಿರುದ್ಧ ಕೇಸು ದಾಖಲಿಸಿದ್ದೇವೆ ಎಂದು ಕಾಶೇಮ್ ಹೇಳಿದ್ದಾರೆ.

ಆಡಳಿತವನ್ನು ದುರುಪಯೋಗಪಡಿಸುವುದರೊಂದಿಗೆ ಕೊಲೆಯ ತನಿಖೆಗೆ ಅಡ್ಡಿಯುಂಟುಮಾಡುತ್ತಾರೆ ಎಂಬ ಆಪಾದನೆಯನ್ನು ಇವರು ಹೊಂದಿದ್ದಾರೆ ಎಂದು ಹೇಳಿದ ಕಾಶೇಮ್, ಉದ್ಯಮಿಯಲ್ಲಿ ಬಾಬರ್ ಮೊದಲಿಗೆ ಏಳು ಮಿಲಿಯನ್ ಡಾಲರ್ ಹಣ ನೀಡುವಂತೆ ಕೇಳಿದ್ದರು ಎಂದು ತಿಳಿಸಿದ್ದಾರೆ.
ಮತ್ತಷ್ಟು
ಬುಷ್‌ನಿಂದ ದಲೈಲಾಮ ಖಾಸಗಿ ಭೇಟಿ
ಟರ್ಕಿ-ಅಮೆರಿಕ ಹಳಸಿದ ಸಂಬಂಧ: ರಾಯಭಾರಿ ಹಿಂದಕ್ಕೆ
ಮುಷರಫ್ ಮನವಿಯನ್ನು ತಿರಸ್ಕರಿಸಿದ ಭುಟ್ಟೋ
ಭಯೋತ್ಪಾದನೆಯ ನಾಶ:ಶ್ರೀಲಂಕಾ ಸೇನೆ ಭರವಸೆ
ಡಾ. ಡೆತ್ ಹಸ್ತಾಂತರಕ್ಕೆ ಆಸ್ಟ್ರೇಲಿಯ ಯತ್ನ
ನೇಪಾಳದಲ್ಲಿ ಶೀಘ್ರ ಚುನಾವಣೆ:ಭಾರತ ನಿರೀಕ್ಷೆ