ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಮ್ಯಾನ್ಮಾರ್‌ನಲ್ಲಿ ಬಲಪ್ರಯೋಗ: ವಿಶ್ವಸಂಸ್ಥೆ ಖಂಡನೆ
ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತದ ವಿರುದ್ಧ ಶಾಂತಿಯುತ ಪ್ರತಿಭಟನೆಯನ್ನು ಹಿಂಸಾಮಾರ್ಗದ ಮೂಲಕ ಹತ್ತಿಕ್ಕುವ ಸರ್ಕಾರದ ಕ್ರಮವನ್ನು ವಿಶ್ವಸಂಸ್ಥೆ ಭದ್ರತಾಮಂಡಳಿ ತೀವ್ರವಾಗಿ ಖಂಡಿಸಿದೆ.

ಈ ಬಗ್ಗೆ ಪ್ರಪ್ರಥಮ ಹೇಳಿಕೆ ನೀಡಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿ ಪ್ರತಿಭಟನಾಕಾರರ ವಿರುದ್ಧ ಸರ್ಕಾರದ ಕಾರ್ಯಾಚರಣೆಯನ್ನು ಬಲವಾಗಿ ಖಂಡಿಸುವುದಾಗಿ ಮತ್ತು ಮಿಲಿಟರಿ ಆಡಳಿತಗಾರರು ಮತ್ತು ಪ್ರಜಾತಂತ್ರ ಪರ ವಿರೋಧ ಪಕ್ಷದ ನಡುವೆ ನೈಜ ಮಾತುಕತೆ ನಡೆಯಬೇಕೆಂದು ಕರೆ ನೀಡಿದೆ
.
ರಾಜಿ ಮಾಡಿಕೊಳ್ಳಬೇಕೆಂಬ ಹೇಳಿಕೆಯನ್ನು ಮ್ಯಾನ್ಮಾರ್ ಮಿತ್ರರಾಷ್ಟ್ರ ಚೀನಾ ಸೇರಿದಂತೆ ಎಲ್ಲ 15 ಮಂಡಳಿ ಸದಸ್ಯರು ಅನುಮೋದಿಸಿದ್ದು, ಎಲ್ಲ ರಾಜಕೀಯ ಕೈದಿಗಳನ್ನು ಕೂಡಲೇ ಬಿಡುಗಡೆ ಮಾಡುವ ಅಗತ್ಯವನ್ನು ಪ್ರತಿಪಾದಿಸಿದೆ.

ಪ್ರಮುಖ ಸರ್ಕಾರಗಳ ಜತೆ ಸಮಾಲೋಚನೆಗೆ ಪ್ರಧಾನಕಾರ್ಯದರ್ಶಿ ಬಾನ್ ಕಿ ಮೂನ್ ವಿಶ್ವಸಂಸ್ಥೆಯ ಪ್ರತಿನಿಧಿ ಇಬ್ರಾಹಿಂ ಗಂಬಾರಿಯನ್ನು ಪುನಃ ಕಳಿಸಲಿದ್ದಾರೆಂದು ವಿಶ್ವಸಂಸ್ಥೆ ಪ್ರಕಟಿಸಿದ ಸ್ವಲ್ಪ ಹೊತ್ತಿನಲ್ಲೇ ಔಪಚಾರಿಕ ಸಭೆಯಲ್ಲಿ ಮಂಡಳಿ ಹೇಳಿಕೆಯನ್ನು ಓದಲಾಯಿತು.

ಕಳೆದ ಸೆಪ್ಟೆಂಬರ್‌ನಲ್ಲಿ ವಿದ್ಯಾರ್ಥಿಗಳು ಆರಂಭದಲ್ಲಿ ಮತ್ತು ಬಳಿಕ ಬೌದ್ಧ ಬಿಕ್ಕುಗಳಿಂದ ನಡೆದ ಪ್ರತಿಭಟನೆಯನ್ನು ಪಡೆಗಳು ಬಲಪ್ರಯೋಗದಿಂದ ಹತ್ತಿಕ್ಕಿದ ಬಳಿಕ ಬಾನ್ ಗಂಬಾರಿಯನ್ನು ಮ್ಯಾನ್ಮಾರ್‌ಗೆ ಕಳಿಸಿದ್ದರು. ಕಳೆದ ವಾರ ಗಂಬಾರಿ ವಾಪಸಾದ ಬಳಿಕ ಪ್ರತಿಭಟನೆಕಾರರ ಮೇಲೆ ಮುಂದುವರಿದ ಕಾರ್ಯಾಚರಣೆಯಿಂದ ಕಳವಳವಾಗಿದೆ ಎಂದು ಬಾನ್ ಭದ್ರತಾ ಮಂಡಳಿಗೆ ತಿಳಿಸಿದ್ದರು.
ಮತ್ತಷ್ಟು
ಮೂರು ಮಿಲಿಯನ್ ಡಾಲರ್ ಲಂಚ ಸ್ವೀಕರಿಸಿದ ಸಚಿವರು
ಬುಷ್‌ನಿಂದ ದಲೈಲಾಮ ಖಾಸಗಿ ಭೇಟಿ
ಟರ್ಕಿ-ಅಮೆರಿಕ ಹಳಸಿದ ಸಂಬಂಧ: ರಾಯಭಾರಿ ಹಿಂದಕ್ಕೆ
ಮುಷರಫ್ ಮನವಿಯನ್ನು ತಿರಸ್ಕರಿಸಿದ ಭುಟ್ಟೋ
ಭಯೋತ್ಪಾದನೆಯ ನಾಶ:ಶ್ರೀಲಂಕಾ ಸೇನೆ ಭರವಸೆ
ಡಾ. ಡೆತ್ ಹಸ್ತಾಂತರಕ್ಕೆ ಆಸ್ಟ್ರೇಲಿಯ ಯತ್ನ