ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಅಲ್ ಗೋರ್‌ಗೆ ನೊಬೆಲ್ ಪ್ರಶಸ್ತಿ
ಹವಾಮಾನ ಬದಲಾವಣೆಯ ಬೆದರಿಕೆ ಬಗ್ಗೆ ಪರಿಣಾಮಕಾರಿಯಾಗಿ ಪ್ರಚಾರ ಮಾಡಿದ ಅಮೆರಿಕದ ಮಾಜಿ ಉಪಾಧ್ಯಕ್ಷ ಅಲ್ ಗೋರ್ ಅವರು ಶುಕ್ರವಾರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಹವಾಮಾನ ಬದಲಾವಣೆ ಬಗ್ಗೆ ಅಂತರಸರ್ಕಾರಿ ಸಮಿತಿಯೊಂದರ ಜತೆ ಗೋರ್ ಪ್ರಶಸ್ತಿಯನ್ನು ಹಂಚಿಕೊಳ್ಳಲಿದ್ದಾರೆ.

ನಾರ್ವೆಯ ನೊಬೆಲ್ ಸಮಿತಿ ಈ ಪ್ರಶಸ್ತಿಯನ್ನು ಪ್ರಕಟಿಸಿದೆ. ಹವಾಮಾನ ಬದಲಾವಣೆ ಬಗ್ಗೆ ಪ್ರಚಾರ ಮಾಡಿದ ಕೆನಡದ ಕಾರ್ಯಕರ್ತ ಶೀಲ ವಾಟ್ ಕ್ಲೌಟಿಯರ್ ಹೆಸರು ಕೂಡ ನೊಬೆಲ್ ಶಾಂತಿ ಪ್ರಶಸ್ತಿಗೆ ಆದ್ಯತಾ ಪಟ್ಟಿಯಲ್ಲಿದ್ದು, ಅವರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿ ಗೋರ್ ಪ್ರಶಸ್ತಿಯನ್ನು ಗೆದ್ದುಕೊಂಡರು.

ಬೌದ್ಧ ಬಿಕ್ಕು ತಿಕ್ ಕಾಂಗ್ ದೊ, ಮಾಜಿ ಫಿನಿಷ್ ಅಧ್ಯಕ್ಷ ಮಾರ್ಟಿ ಅತಿಸಾರಿ ಮತ್ತು ಮಕ್ಕಳನ್ನು ಉಳಿಸಿ ಮಾನವೀಯ ಸಮೂಹದ ಹೆಸರುಗಳನ್ನು ಕೂಡ ನೊಬೆಲ್ ಶಾಂತಿಪ್ರಶಸ್ತಿಗೆ ಸೂಚಿಸಲಾಗಿತ್ತು,

59 ವರ್ಷ ವಯಸ್ಸಿನ ಗೋರ್ ಪುಸ್ತಕವನ್ನು ಪ್ರಕಟಿಸಿ "ಆನ್ ಇನ್‌ಕನವೀನಿಯಂಟ್ ಟ್ರೂತ್‌" ಆಸ್ಕರ್ ವಿಜೇತ ಸಾಕ್ಷ್ಯ ಚಿತ್ರವನ್ನು ಜಾಗತಿಕ ತಾಪಮಾನದ ವಿರುದ್ಧ ಆಂದೋಳನವಾಗಿ ಪ್ರದರ್ಶಿಸಿದ್ದರು. ವಾಟ್ ಕ್ಲೌಟಿಯರ್ ಕೂಡ ಆರ್ಕ್‌ಟಿಕ್‌ನ ದೇಶೀಯರಿಗೆ ಹವಾಮಾನ ಬದಲಾವಣೆಯು ಹೇಗೆ ಜೀವನಕ್ಕೆ ಬೆದರಿಕೆಯೊಡ್ಡಿದೆ ಎಂದು ತೋರಿಸಿದ್ದರು.

ಇವರಿಬ್ಬರನ್ನೂ ನೊಬೆಲ್ ಶಾಂತಿ ಪ್ರಶಸ್ತಿಗೆ ಹೆಸರಿಸಲಾಗಿತ್ತು. ಹಸಿರುಮನೆ ಅನಿಲದ ಪರಿಣಾಮದಿಂದ ಉಂಟಾಗುವ ಜಾಗತಿಕ ತಾಪಮಾನದಿಂದ ಸಮುದ್ರಮಟ್ಟ ಏರುತ್ತಿದ್ದು ಬಿರುಗಾಳಿ, ಬರಗಾಲ ಮತ್ತಿತರ ಹವಾಮಾನ ವೈಪರೀತ್ಯಗಳು ಉಂಟಾಗುತ್ತಿದೆ.

ಇದರಿಂದ ಆಫ್ರಿಕಾದಿಂದ ಅಲಾಸ್ಕವರೆಗೆ ಲಕ್ಷಾಂತರ ಜನರು ಸ್ಥಳಾಂತರಗೊಳ್ಳುವ ಬೆದರಿಕೆಯೊಡ್ಡಿದೆ. ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಮಿತಿಗೊಳಿಸುವ ಕ್ರಮಗಳನ್ನು ಚರ್ಚಿಸಲು ವಿಶ್ವಸಂಸ್ಥೆಯು ಬಾಲಿಯಲ್ಲಿ ಸಮಾವೇಶ ಹಮ್ಮಿಕೊಳ್ಳಲಿದೆ.
ಮತ್ತಷ್ಟು
ಮ್ಯಾನ್ಮಾರ್‌ನಲ್ಲಿ ಬಲಪ್ರಯೋಗ: ವಿಶ್ವಸಂಸ್ಥೆ ಖಂಡನೆ
ಮೂರು ಮಿಲಿಯನ್ ಡಾಲರ್ ಲಂಚ ಸ್ವೀಕರಿಸಿದ ಸಚಿವರು
ಬುಷ್‌ನಿಂದ ದಲೈಲಾಮ ಖಾಸಗಿ ಭೇಟಿ
ಟರ್ಕಿ-ಅಮೆರಿಕ ಹಳಸಿದ ಸಂಬಂಧ: ರಾಯಭಾರಿ ಹಿಂದಕ್ಕೆ
ಮುಷರಫ್ ಮನವಿಯನ್ನು ತಿರಸ್ಕರಿಸಿದ ಭುಟ್ಟೋ
ಭಯೋತ್ಪಾದನೆಯ ನಾಶ:ಶ್ರೀಲಂಕಾ ಸೇನೆ ಭರವಸೆ