ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದ ದೂರಿನ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡುವವರೆಗೆ ಮಾಜಿ ಪ್ರಧಾನಮಂತ್ರಿ ಭೆನಜೀರ್ ಭುಟ್ಟೋ ಅವರು ಸ್ವಯಂಗಡಿಪಾರಿನಿಂದ ಹಿಂತಿರುಗಬಾರದು ಎಂದು ಮುಷರಫ್ ಭುಟ್ಟೋ ಅವರನ್ನು ಮತ್ತೊಮ್ಮೆ ಒತ್ತಾಯಿಸಿದ್ದಾರೆ.
ಕೋರ್ಟ್ ತೀರ್ಪಿನ ತನಕ ತನ್ನ ಹಿಂತಿರುಗುವಿಕೆಯನ್ನು ಭುಟ್ಟೋ ಮುಂದೂಡಬೇಕೆಂದು ನಾನು ಈಗಾಗಲೇ ಅವರಿಗೆ ಸೂಚನೆಯನ್ನು ನೀಡಿದ್ದೇನೆ ಎಂದು ಸೇನಾಧಿಕಾರಿಯವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಒಂದುವೇಳೆ ಭುಟ್ಟೋ ನಿಮ್ಮ ಸಲಹೆಯನ್ನು ಕಡೆಗಣಿಸಿದರೆ ಎಂಬ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಮುಷರಫ್, ಆ ರೀತಿ ಆಗುವುದಿಲ್ಲ, ಭುಟ್ಟೋ ಬೇಗನೆ ಹಿಂತಿರುಗದಂತೆ ನಾನು ಒತ್ತಾಯಿಸುತ್ತೇನೆ ಎಂಬುದಾಗಿ ಉತ್ತರಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಮುಷರಫ್ ಅಭ್ಯರ್ಥಿತನವನ್ನು ಪ್ರಶ್ನಿಸಿ ಸಲ್ಲಿಸಿರುವ ದೂರಿನ ತೀರ್ಪನ್ನು ಅಪೆಕ್ಸ್ ಕೋರ್ಟ್ ನೀಡುವವರೆಗೆ ಭುಟ್ಟೋ ಹಿಂತಿರುಗಬಾರದು ಎಂಬ ಮುಷರಫ್ ಅವರ ಒತ್ತಾಯಕ್ಕೆ ಪ್ರಧಾನಮಂತ್ರಿ ಶೌಕತ್ ಅಜೀಜ್ ಅವರೂ ಬೆಂಬಲ ನೀಡಿದ್ದಾರೆ.
ಮುಷರಫ್ ವಿರುದ್ಧದ ಕೇಸಿನ ವಿಚಾರಣೆಯನ್ನು ನ್ಯಾಯಾಲಯವು ಅಕ್ಟೋಬರ್ 17ರಂದು ಪ್ರಾರಂಭಿಸಲಿದೆ.
|