ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಒತ್ತಾಯ
ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಅಮೆರಿಕ ಮಾಜಿ ಉಪಾಧ್ಯಕ್ಷ ಅಲ್ ಗೋರ್ ಅವರನ್ನು 2008ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಒತ್ತಾಯಿಸುವಂತೆ, ಅವರ ರಾಜಕೀಯ ಬೆಂಬಲಿಗರು ಪ್ರಚಾರ ನಡೆಸುತ್ತಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋರ್,ತನ್ನ ಮುಂದಿನ ರಾಜಕೀಯ ಯೋಜನೆಗಳ ಬಗ್ಗೆ ಹೇಳಲು ನಿರಾಕರಿಸುವುದರ ಮೂಲಕ ಈ ವಿಚಾರದಲ್ಲಿರುವ ಅನುಮಾನಕ್ಕೆ ಪುಷ್ಠಿ ನೀಡಿದ್ದಾರೆ.

ಅಲ್‌ಗೋರ್ ನಮ್ಮ ಪಕ್ಷಕ್ಕೆ ಸರಿಯಾದ ವ್ಯಕ್ತಿಯಾಗಿದ್ದು, ಶ್ವೇತಭವನಕ್ಕೆ ಮರಳಬಹುದಾದ ಏಕೈಕ ನಾಯಕ ಮತ್ತು ಆಡಳಿತಗಾರರಾಗಿದ್ದಾರೆ ಎಂದು ನಂಬಿರುವ ಕೆಲವು ಡೆಮಕ್ರೆಟ್‌ಗಳು ಗೋರ್ ಪರ ತಮ್ಮ ಪ್ರಚಾರವನ್ನು ಪ್ರಾರಂಭಿಸಿವೆ.ಡ್ರಾಫ್ಟ್‌ಗೋರ್ ಡಾಟ್ ಕಾಮ್ ಎಂಬ ವೆಬ್‍‌ಸೈಟನ್ನೂ ಪ್ರಾರಂಭಿಸಿವೆ.

ಒಂದುವೇಳೆ ಅಲ್‌ಗೋರ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಖಂಡಿತವಾಗಿಯೂ ಗೆಲುವು ಸಾಧಿಸುತ್ತಾರೆ ಎಂದು ಡೆಮಕ್ರೆಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ.



ಮತ್ತಷ್ಟು
ಮರಳುವಿಕೆಯನ್ನು ಮುಂದೂಡಲು ಮತ್ತೊಮ್ಮೆ ಒತ್ತಾಯ
ಅಲ್ ಗೋರ್‌ಗೆ ನೊಬೆಲ್ ಪ್ರಶಸ್ತಿ
ಮ್ಯಾನ್ಮಾರ್‌ನಲ್ಲಿ ಬಲಪ್ರಯೋಗ: ವಿಶ್ವಸಂಸ್ಥೆ ಖಂಡನೆ
ಮೂರು ಮಿಲಿಯನ್ ಡಾಲರ್ ಲಂಚ ಸ್ವೀಕರಿಸಿದ ಸಚಿವರು
ಬುಷ್‌ನಿಂದ ದಲೈಲಾಮ ಖಾಸಗಿ ಭೇಟಿ
ಟರ್ಕಿ-ಅಮೆರಿಕ ಹಳಸಿದ ಸಂಬಂಧ: ರಾಯಭಾರಿ ಹಿಂದಕ್ಕೆ