ಚೀನಾದ ವಿರೋಧ ವ್ಯಕ್ತವಾಗುತ್ತಿದ್ದಂತೆ ಬೌದ್ಧ ಧಾರ್ಮಿಕ ಗುರು ದಲಾಯಿ ಲಾಮಾ ಅವರನು ಗೌರವಿಸುವ ತನ್ನ ನಿರ್ಧಾರದಿಂದ ಅಮೆರಿಕ ಹಿಂದೆ ಸರಿದಿದ್ದು, ಟಬೇಟಿನ ನಾಯಕ ದಲಾಯಿ ಲಾಮಾ ಅವರನ್ನು ಕೇವಲ ಬೌದ್ಧರ ಧಾರ್ಮಿಕ ಗುರು ಎಂದು ಮಾತ್ರ ಪರಿಗಣಿಸಿರುವುದಾಗಿ ಹೇಳಿದೆ. ಚೀನಾ ದೃಷ್ಟಿಯಲ್ಲಿ ಪ್ರತ್ಯೆಕತಾವಾದಿಯಾಗಿರುವ ನೊಬೆಲ್ ಪುರಸ್ಕೃತ ದಲಾಯಿ ಲಾಮಾ ಅವರನ್ನು ಅಮೆರಿಕದ ಕಾಂಗ್ರೆಸ್, ತನ್ನ ಅತ್ಯುಚ್ಚ ನಾಗರಿಕ ಪ್ರಶಸ್ತಿಯಾದ ಕಾಂಗ್ರೆಸನಲ್ ಮೆಡಲ್‌ನ್ನು ಬರುವ ಬುಧವಾರ ಕ್ಯಾಪಿಟಲ್ ಹಿಲ್‌ನಲ್ಲಿ ನೀಡಿ ಗೌರವಿಸಲಿದೆ.
ಸತ್ಕಾರ ಸಮಾರಂಭದಲ್ಲಿ ಜಾರ್ಜ್ ಬುಷ್ ಅವರು ತಮ್ಮ ಪತ್ನಿಯೊಂದಿಗೆ ಉಪಸ್ಥಿತರಿರಲಿದ್ದು, ಬೌದ್ಧರ ಧಾರ್ಮಿಕ ಗುರು ದಲಾಯಿ ಲಾಮಾ ಅವರನ್ನು ಸಮಾರಂಭಕ್ಕೆ ಮುನ್ನ ಶ್ವೇತ ಭವನದಲ್ಲಿ ಭೇಟಿಯಾಗಲಿದ್ದಾರೆ.
ಟಿಬೇಟ್ ನಾಯಕನಿಗೆ ಅಮೆರಿಕ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸುವುದುನ್ನು ಚೀನಾ ವಿರೋಧಿಸುತ್ತದೆ. ಅಲ್ಲದೇ ದಲಾಯಿ ಲಾಮಾ ಅವರ ವಿಚಾರದ ಮೂಲಕ ತನ್ನ ದೇಶದ ಆಂತರಿಕ ವ್ಯವಹಾರದಲ್ಲಿ ತೃತೀಯ ಪಕ್ಷ ಮದ್ಯ ಪ್ರವೇಶಿಸುವುದನ್ನು ಇಷ್ಟಪಡುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಲಿವು ಜಿಯಾಂಚೊ ಹೇಳಿದ್ದಾರೆ.
ಚೀನಾದ ವಿರೋಧಕ್ಕೆ ಅಮೆರಿಕದ ಗೃಹಖಾತೆ ಸಚಿವಾಲಯ ಸ್ಪಷ್ಟೀಕರಣ ನೀಡಿದ್ದು, ದಲಾಯಿ ಲಾಮಾ ಒರ್ವ ಆದ್ಯಾತ್ಮಿಕ ತಳಹದಿಯ ವ್ಯಕ್ತಿಯಾಗಿದ್ದು, ಅವರ ಜೀವನದಿಂದ ಅನೇಕರು ಪ್ರಭಾವಿತರಾಗಿದ್ದಾರೆ. ನನಗೆ ತಿಳಿದ ಮಟ್ಟಿಗೆ ನಾಗರಿಕ ಪ್ರಶಸ್ತಿ ನೀಡಲು ಕಾಂಗ್ರೆಸ್ ನಿರ್ಧರಿಸಿರುವುದು. ಅಮೆರಿಕದ ಮೇಲಿನ ದೃಷ್ಟಿಕೋನವನ್ನು ಬದಲಿಸದು ಎಂದು ಹೇಳಿದರು.
|