ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಸೇನೆಯಿಂದ ಉಗ್ರರ ದೋಣಿ ನಾಶ
ಜಾಫ್ನಾದ ಉತ್ತರ ಭಾಗದಲ್ಲಿರುವ ಕರಾವಳಿ ಪ್ರದೇಶದಲ್ಲಿ ಸೇನಾಪಡೆಗಳು ಉಗ್ರರ ದೋಣಿಯೊಂದನ್ನು ನಾಶಪಡಿಸಿ ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆಂದು ಸೇನಾ ಮೂಲಗಳು ತಿಳಿಸಿವೆ.

ಬೆಳಗಿನ ಜಾವದಲ್ಲಿ ಎಲ್‌ಟಿಟಿಇ ಉಗ್ರರು ಮೀನುಗಾರರ ವೇಶದಲ್ಲಿ ಪೂನಾರ್ಯ ಪ್ರದೇಶವನ್ನು ಪ್ರವೇಶಿಸಲು ಯತ್ನಿಸಿದಾಗ ಶ್ರೀಲಂಕಾದ ಸೇನೆಯ ನೌಕಾಪಡೆಗಳು ಶಂಕಾಸ್ಪದ ವರ್ತನೆಯಿಂದಾಗಿ ದಾಳಿ ಮಾಡಲು ಯತ್ನಿಸಿದಾಗ, ಮರು ದಾಳಿ ಆರಂಭಿಸಿದ ಉಗ್ರರ ಮೇಲೆ ನಿಯಂತ್ರಣ ಸಾಧಿಸಲು ಕಾರ್ಯಾಚರಣೆ ನಡೆಸಿದಾಗ ಉಗ್ರರಿದ್ದ ದೋಣಿ ನಾಶವಾಗಿದೆ ಎಂದು ಬ್ರಿಗೇಡಿಯರ್ ಉದಯ ನನಯಕ್ಕರ್ ತಿಳಿಸಿದ್ದಾರೆ.

ಶ್ರೀಲಂಕಾದ ಉತ್ತರ ಭಾಗದಲ್ಲಿರುವ ವಾಯುನಿಯಾ ಪ್ರದೇಶದಲ್ಲಿ ಸೇನಾಪಡೆಗಳ ಮತ್ತು ಉಗ್ರರ ಮಧ್ಯೆ ಭಾರಿ ಗುಂಡಿನ ದಾಳಿ ನಡೆದು ಒಂಬತ್ತು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

2005ರಿಂದ ಸೇನಾಪಡೆಗಳ ಮತ್ತು ಉಗ್ರರ ನಡುವಿನ ಕಾರ್ಯಾಚರಣೆಯಿಂದಾಗಿ ಇಲ್ಲಿಯವರೆಗೆ ಸುಮಾರು 5000 ಸಾವಿರ ಮಂದಿ ಸಾವನ್ನಪ್ಪಿದ್ದಾರೆ.

ಕಳೆದ ಎರಡುವರೆ ದಶಕದಲ್ಲಿ ಅಂದಾಜು 70 ಸಾವಿರ ಮಂದಿ ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಸಚಿವಾಲಯ ವರದಿ ಮಾಡಿದೆ.
ಮತ್ತಷ್ಟು
ಲಾಮಾ ಸತ್ಕಾರ ನಿರಾಕರಿಸಿದ ಅಮೆರಿಕ
ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಒತ್ತಾಯ
ಮರಳುವಿಕೆಯನ್ನು ಮುಂದೂಡಲು ಮತ್ತೊಮ್ಮೆ ಒತ್ತಾಯ
ಅಲ್ ಗೋರ್‌ಗೆ ನೊಬೆಲ್ ಪ್ರಶಸ್ತಿ
ಮ್ಯಾನ್ಮಾರ್‌ನಲ್ಲಿ ಬಲಪ್ರಯೋಗ: ವಿಶ್ವಸಂಸ್ಥೆ ಖಂಡನೆ
ಮೂರು ಮಿಲಿಯನ್ ಡಾಲರ್ ಲಂಚ ಸ್ವೀಕರಿಸಿದ ಸಚಿವರು