ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಶಾಂತಿ ಮಾತುಕತೆ ತಿರಸ್ಕರಿಸಲು ಖೋಮೆನಿ ಕರೆ
ಮಧ್ಯಪೂರ್ವ ದೇಶವೊಂದರಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಸಂಘಟಿತ ಶಾಂತಿ ಮಾತುಕತೆಯನ್ನು ಮುಸ್ಲಿಮರು ಸಾರಸಗಟಾಗಿ ತಿರಸ್ಕರಿಸಬೇಕು ಎಂದು ಇರಾನ್‌ನ ಸರ್ವೊಚ್ಛ ನಾಯಕ ಐಯತೋಲ್ಲಾ ಅಲಿ ಖಮೇನಿ ಕರೆ ನೀಡಿದ್ದಾನೆ.

ನವೆಂಬರ್‌ನಲ್ಲಿ ನೆಡಯಲಿರುವ ಅಮೆರಿಕ ಯೋಜಿತ ಈ ಶಾಂತಿ ಮಾತುಕತೆಯು ಮೋಸದ್ದಾಗಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಗಂಭೀರವಾಗಿ ಆರೋಪಿಸಿರುವ ಖಮೇನಿ ಅವರು, ಆ ಸಭೆಯನ್ನು ಉಳಿದ ರಾಷ್ಟ್ರಗಳು ಬೆಂಬಲವನ್ನು ನೀಡುತ್ತವೆಯೇ ಎಂಬುದು ಪ್ರಶ್ನೆಯಾಗಿದೆ ಎಂದಿದ್ದಾರೆ.

ಶನಿವಾರದಂದು ರಂಜಾನ್‌ನ ಈದ್ ಉಲ್ ಫಿತರ್ ಹಬ್ಬದ ವಿಶೇಷ ಪ್ರಾರ್ಥನೆಯ ನಂತರ ಅವರು ನೆರೆದಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದರು.

ಆ ನಿಟ್ಟಿನಲ್ಲಿ ಆ ಮೋಸದ ಸಭೆಗಾಗಿ ಪ್ಯಾಲೆಸ್ತೇನ್ ಎದುರು ನೋಡುತ್ತಿದೆ.ಉಳಿದ ಸರಕಾರಗಳು ಆ ಸಭೆ ನಡೆಸಲು ಹೇಗೆ ಅನುಮತಿ ನೀಡುತ್ತವೆ ಎಂದು ಪ್ರಶ್ನಿಸಿದರು. ಅದಕ್ಕಾಗಿ ಮಧ್ಯ ಪೂರ್ವ ದೇಶದ ಎಲ್ಲ ಮುಸ್ಲಿಮರು ಈ ಶಾಂತಿ ಸಭೆಯನ್ನು ಬಹಿಷ್ಕರಿಸಲು ತಾನು ಕರೆ ನೀಡುತ್ತಿರುವುದಾಗಿ ಖಮೇನಿ ಹೇಳಿದರು.
ಮತ್ತಷ್ಟು
ಮಾವೊವಾದಿಗಳು ಪ್ರಜಾಪ್ರಭುತ್ವದ ವಿರೋಧಿಗಳು
ಸೇನೆಯಿಂದ ಉಗ್ರರ ದೋಣಿ ನಾಶ
ಲಾಮಾ ಸತ್ಕಾರ ನಿರಾಕರಿಸಿದ ಅಮೆರಿಕ
ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಒತ್ತಾಯ
ಮರಳುವಿಕೆಯನ್ನು ಮುಂದೂಡಲು ಮತ್ತೊಮ್ಮೆ ಒತ್ತಾಯ
ಅಲ್ ಗೋರ್‌ಗೆ ನೊಬೆಲ್ ಪ್ರಶಸ್ತಿ