ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ನವಾಜ್ ಲಂಡನ್‌ಗೆ ತೆರಳುವ ನಿರ್ಧಾರವಿಲ್ಲ
ಮಾಜಿ ಪ್ರಧಾನಮಂತ್ರಿ ನವಾಜ್ ಶರೀಫ್ ಸೌದಿ ಅರೇಬಿಯಾದಿಂದ ಲಂಡನ್‌ಗೆ ಹಿಂತಿರುಗುವ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಪಾಕಿಸ್ತಾನ ಪ್ರಧಾನ ಮಂತ್ರಿ ಶೌಕತ್ ಅಜೀಜ್ ತಿಳಿಸಿದ್ದಾರೆ.

ನವಾಜ್ ಶರೀಫ್ ಅವರು ಸೌದಿ ಸರಕಾರದ ಒಪ್ಪಂದದ ಅಡಿಯಲ್ಲಿ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದಾರೆ ಎಂದು ಅವರು ಹೇಳಿದರು.

ಶರೀಫ್, ನವೆಂಬರ್ 15ರಂದು ತನ್ನ ತವರಿಗೆ ಹಿಂತಿರುಗುತ್ತಾರೆ ಎಂದು ಶರೀಪ್ ಅವರ ಪುತ್ರ ಹಸನ್ ಶರೀಫ್ ಅಕ್ಟೋಬರ್ 9ರಂದು ಮಾಧ್ಯಮವೊಂದರಲ್ಲಿ ಹೇಳಿದ್ದರು.

ಈದ್ ಹಬ್ಬದ ನಂತರ ಸೌದಿ ಅರೇಬಿಯಾವನ್ನು ಬಿಡಲು, ಸೌದಿ ಸರಕಾರವು ಶರೀಫ್ ಅವರಿಗೆ ಅನುಮತಿ ನೀಡಿದೆ ಎಂಬುದಾಗಿ ಮೂಲಗಳು ತಿಳಿಸಿವೆ

ಶರೀಫ್, ಈ ತಿಂಗಳ 17 ಅಥವಾ 18ರಂದು ಲಂಡನ್‌ಗೆ ಹಿಂತಿರುಗುತ್ತಾರೆ ಎಂಬುದಾಗಿ ಶರೀಫ್ ಅವರ ಪತ್ನಿ ಕುಲ್ಸೂಮ್ ನವಾಜ್ ಅವರು ಕೂಡಾ ನಿರ್ಧರಿಸಿದ್ದರು.
ಮತ್ತಷ್ಟು
ಭುಟ್ಟೋ ಭೃಷ್ಟಾಚಾರ ಆರೋಪ ಎದುರಿಸಬೇಕು:ಅಜೀಜ್
ಭುಟ್ಟೊಗೂ ನೆಲದ ಕಾನೂನು ಅನ್ವಯ
ಶಾಂತಿ ಮಾತುಕತೆ ತಿರಸ್ಕರಿಸಲು ಖೋಮೆನಿ ಕರೆ
ಮಾವೊವಾದಿಗಳು ಪ್ರಜಾಪ್ರಭುತ್ವದ ವಿರೋಧಿಗಳು
ಸೇನೆಯಿಂದ ಉಗ್ರರ ದೋಣಿ ನಾಶ
ಲಾಮಾ ಸತ್ಕಾರ ನಿರಾಕರಿಸಿದ ಅಮೆರಿಕ