ಯುರೋಪ್ ಮತ್ತು ಅಮೆರಿಕದಲ್ಲಿರುವ ಮುಸ್ಲಿಮರ ನಡುವೆ ಅಲ್‌ಖಾಯಿದಾ ಮತ್ತು ಇತರ ಭಯೋತ್ಪಾದಕ ಗುಂಪುಗಳ ಮೂಲಕ ಜಿಹಾದ್ ಸಂದೇಶವನ್ನು ಸಾರಲು ಕಾರ್ ಬಾಂಬ್ ಮತ್ತು ಇತರ ಭಯೋತ್ಪಾದನೆಯ ಕೃತ್ಯಗಳ ವಿಡಿಯೋ ಒಳಗೊಂಡ ಸುಮಾರು 100 ಇಂಗ್ಲಿಷ್ ಸೈಟುಗಳು ಸಹಕರಿಸುತ್ತಿವೆ ಎಂದು ವರದಿಯೊಂದು ತಿಳಿಸಿದೆ.
ಅಮೆರಿಕ ಮತ್ತು ಯುರೋಪ್ ಮುಸ್ಲಿಮರಿಗೆ ಇರಾಕ್ ಯುದ್ಧದ ಮೇಲಿರುವ ಕೋಪದ ಉಪಯೋಗವನ್ನು ಪಡೆದು , ಉಗ್ರಗಾಮಿಗಳು ಅಮೆರಿಕ ಮತ್ತು ಯುರೋಪ್‌ನ ಯುವ ಮುಸ್ಲಿಮರಿಗೆ ಮನವಿ ಮಾಡಿರುವುದು ಭಯೋತ್ಪಾದಕ ಮಾಹಿತಿ ಹಾಗೂ ಸಂದರ್ಶನಗಳ ವಿಮರ್ಷೆಯಿಂದ ಸ್ಪಷ್ಟವಾಗಿದೆ ಎಂಬುದಾಗಿ ಭಯೋತ್ಪಾದಕ ಪರಿಣಿತರು ಉಲ್ಲೇಖಿಸಿದ್ದನ್ನು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ತಾವು ಪೈಶಾಚಿಕ ಭಯೋತ್ಪಾದನೆಯ ಕೃತ್ಯದ ವಿರುದ್ಧ ಹೋರಾಡುತ್ತೇವೆ ಎಂಬ ಭರವಸೆಯೊಂದಿಗೆ ಅಲ್‌ಖಾಯಿದಾ ಗುಂಪಿಗೆ ಪರಿವರ್ತನೆಗೊಂಡ ಕೆಲವು ಕ್ರಿಸ್ಟಿಯನ್ ಯುರೋಪಿಯನ್ ಗುಂಪುಗಳ ಕುರಿತಾಗಿ " ರಾಕನ್ ಬಿನ್ ವಿಲಿಯಮ್ಸ್ " ಎಂಬ ಅಂತರ್ಜಾಲ ಕಾದಂಬರಿಗಳೂ ಇವೆ.
ಕಾರ್ ಬಾಂಬ್‌ಗಳ ಧ್ವನಿಮುದ್ರಣಗಳನ್ನು ಸಂಕಲನ ಸಿನಿಮಾ ಮತ್ತು ವೀಡಿಯೋಗಳಾಗಿ ಪರಿವರ್ತಿಸಿದ್ದು, ಎಲ್ಲವೂ ಪಾಶ್ಚಿಮಾತ್ಯ ಸೈಟ್‌ಗಳಾದ ಯೂಟ್ಯೂಬ್ ಮುಂತಾದವುಗಳಲ್ಲಿ ಸಿದ್ಧವಾಗಿ ದೊರಕುತ್ತಿವೆ.
ಇದು ಹಾಲಿವುಡ್ ಸಿನಿಮಾದ ರೀತಿಯಲ್ಲಿದೆ ಎಂದು ಅಲ್‌ಖಾಯಿದಾ ಅಭಿಮಾನಿ ಜರ್ಮನಿನ 21 ವರ್ಷದ ಅಬು ಸಲೇಹ್ ಅವರು ಪ್ರತಿಕ್ರಯಿಸಿದ್ದನ್ನು ಉಲ್ಲೇಖಿಸಲಾಗಿದೆ. ತಾಜಾ ವೀಡಿಯೋಗಳನ್ನು ವೀಕ್ಷಿಸುವ ಸಲುವಾಗಿ ಇವರು ವಾರಕ್ಕೆ ಎರಡು ಸಲ ಬರ್ಲಿನ್‌ನ ಸೈಬರ್ ಕೆಫೆಗೆ ಹೋಗುತ್ತಾರೆ.
|