ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಬಂಧನ ನಿಲ್ಲಿಸಲು ಮ್ಯಾನ್ಮಾರ್‌ಗೆ ಆದೇಶ
ಭಿನ್ನಮತೀಯರ ಬಂಧನ ನಿಲ್ಲಿಸಿ ಎಂದು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಇಬ್ರಾಹಿಂ ಗಂಬಾರಿ ಮ್ಯಾನ್ಮಾರ್‌ಗೆ ಆದೇಶಿದ್ದಾರೆ. ಆದರೆ ವ್ಯಾಪಕ ಅಂತಾರಾಷ್ಟ್ರೀಯ ಟೀಕೆಗಳ ನಡುವೆಯೂ ಮಿಲಿಟರಿ ಜುಂಟಾ ತನ್ನದೇ ಪ್ರಜಾಪ್ರಭುತ್ವ ನೀಲನಕ್ಷೆಯನ್ನು ಸಿದ್ಧಪಡಿಸುವುದಾಗಿ ಪಣತೊಟ್ಟಿದೆ.

ನಾವು ನಮ್ಮ ಮಾರ್ಗದಿಂದ ಹಿಂದೆ ಸರಿಯುವುದಿಲ್ಲ ಎಂದು ಜನರಲ್‌ಗಳ ಏಳು ಅಂಶದ ಮಾಸ್ಟರ್ ಪ್ಲಾನ್ ಯೋಜನೆಯ ಬಗ್ಗೆ ಅಧಿಕೃತ ನ್ಯೂ ಲೈಟ್ ಆಫ್ ಮಯನ್ಮಾರ್ ಸುದ್ದಿಪತ್ರಿಕೆ ಪ್ರತಿಕ್ರಿಯಿಸಿದೆ. ನಮ್ಮ ಜತೆ ಪ್ರಾಮಾಣಿಕವಾಗಿ ಕೈಜೋಡಿಸುವವರಿಗೆ ಸ್ವಾಗತ ಎಂದು ಹೇಳಿರುವ ಪತ್ರಿಕೆ ದಾರಿಯಲ್ಲಿ ಅಡ್ಡಬರುವ ಎಲ್ಲ ಅಡ್ಡಿಆತಂಕಗಳನ್ನು ನಾವು ಎದುರಿಸುತ್ತೇವೆ ಎಂದು ತಿಳಿಸಿದೆ.

ಜುಂಟಾ ವಿರುದ್ಧ ಸಂಘಟಿತ ರಂಗಕ್ಕೆ ಬೆಂಬಲ ಕ್ರೋಢೀಕರೀಸಲು ಪ್ರಾದೇಶಿಕ ಯಾತ್ರೆ ಕೈಗೊಂಡಿರುವ ಗಂಬಾರಿ, ಮ್ಯಾನ್ಮಾರ್‌ನಲ್ಲಿ ಮುಂದುವರಿದ ಬಂಧನಗಳು ಮತ್ತು ಕಾರ್ಯಕರ್ತರಿಗೆ ಬೆದರಿಕೆಯು ಅತ್ಯಂತ ಗೊಂದಲಕಾರಿ ಎಂದು ಹೇಳಿದರು. ಈ ಕ್ರಮಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಥಾಯ್ ವಿದೇಶಾಂಗ ಸಚಿವ ನಿತ್ಯಾ ಪಿಬುಲ್‌ಸೊಂಗ್ರಾಮ್ ಜತೆ ನಡೆದ ಭೇಟಿಯ ಕಾಲದಲ್ಲಿ ನುಡಿದರು.

ಅವರು ಏನು ಮಾಡುತ್ತಿದ್ದಾರೆಂಬ ಬಗ್ಗೆ ನಾವು ಹೆಚ್ಚು ಕಳವಳಕ್ಕೀಡಾಗಿದ್ದೇವೆಯೇ ಹೊರತು ಅವರು ಏನು ಹೇಳುತ್ತಿದ್ದಾರೆಂಬ ಬಗ್ಗೆಯಲ್ಲ ಎಂದು ನುಡಿದ ಗಂಬಾರಿ ಮ್ಯಾನ್ಮಾರ್ ಸರ್ಕಾರವು ಎಲ್ಲ ರಾಜಕೀಯ ಬಂಧಿಗಳನ್ನು ಬಿಡುಗಡೆ ಮಾಡುವಂತೆ ವಿಶ್ವಸಂಸ್ಥೆಯು ಕರೆ ನೀಡುತ್ತದೆಂದು ಹೇಳಿದರು.
ಥೈಲೆಂಡ್ ಬಳಿಕ ಗಂಬಾರಿ ಮಲೇಶಿಯ, ಭಾರತ ಮತ್ತು ಚೀನಕ್ಕೆ ಪ್ರಯಾಣ ಮಾಡಲಿದ್ದಾರೆ. ಇವೆಲ್ಲ ರಾಷ್ಟ್ರಗಳು ಮ್ಯಾನ್ಮಾರ್ ಜತೆ ವ್ಯಾಪಾರ ಬಾಂಧವ್ಯ ಹೊಂದಿದ್ದು, ಇಲ್ಲಿಯವರೆಗೆ ಮ್ಯಾನ್ಮಾರ್ ವಿರುದ್ಧ ಯಾವುದೇ ದಿಗ್ಬಂಧನಕ್ಕೆ ವಿರೋಧ ವ್ಯಕ್ತಪಡಿಸಿದ್ದವು.




ಮತ್ತಷ್ಟು
ಇಂಟರ್‌ನೆಟ್‌ನಲ್ಲಿ ಕಾರ್ ಬಾಂಬ್ ವಿಡಿಯೋ
ನವಾಜ್ ಲಂಡನ್‌ಗೆ ತೆರಳುವ ನಿರ್ಧಾರವಿಲ್ಲ
ವಾಷಿಂಗ್ಟನ್ ಪೋಸ್ಟ್ ವರದಿಗಾರನ ಹತ್ಯೆ
ಭುಟ್ಟೊಗೂ ನೆಲದ ಕಾನೂನು ಅನ್ವಯ
ಶಾಂತಿ ಮಾತುಕತೆ ತಿರಸ್ಕರಿಸಲು ಖೋಮೆನಿ ಕರೆ
ಮಾವೊವಾದಿಗಳು ಪ್ರಜಾಪ್ರಭುತ್ವದ ವಿರೋಧಿಗಳು