ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಎಲ್ಟಿಟಿಇ ದಾಳಿ: 7 ಸೈನಿಕರ ಹತ್ಯೆ
ಎಲ್ಟಿಟಿಇ ಬಂಡುಕೋರರು ಶ್ರೀಲಂಕಾ ಸೇನೆಯ ಮೇಲೆ ಮತ್ತೆ ದಾಳಿ ನಡೆಸಿದ್ದು, ಸೋಮವಾರ ರಾತ್ರಿ ಆಗ್ನೇಯ ಭಾಗದ ಪನಾಮದಲ್ಲಿರುವ ಸೇನಾ ಶಿಬಿರಕ್ಕೆ ನುಗ್ಗಿ ಆರು ಸೈನಿಕರನ್ನು ಹತ್ಯೆಗೈದಿದ್ದಾರೆ.

ಪೊಟ್ಟುವಿಲ್ ಸಮೀಪದ ಸೇನಾ ಶಿಬಿರಕ್ಕೆ ಕಳೆದ ರಾತ್ರಿ ಎಲ್ಟಿಟಿಇ ಪಡೆಗಳು ದಾಳಿ ನಡೆಸಿದ್ದವು. ಘಟನೆಯಲ್ಲಿ ಒಬ್ಬ ಸೈನಿಕ ಗಾಯಗೊಂಡಿದ್ದಾನೆ ಎಂದು ತಿಳಿಸಿರುವ ಮಿಲಿಟರಿ ವಕ್ತಾರ ಉದಯ ನನಯಕ್ಕರ, ಸೇನೆಯು ಎಲ್ಟಿಟಿಇ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ ಎಂದಿದ್ದಾರೆ.

ಇದೇ ವೇಳೆ ಹತ ಸೈನಿಕರ ಮೃತದೇಹ ಒಯ್ಯಲು ಇಂದು ಬೆಳಿಗ್ಗೆ ಆಗಮಿಸಿದ ಮಿಲಿಟರಿ ಟ್ರ್ಯಾಕ್ಟರ್ ಕೂಡ ಉಗ್ರರು ಹುದುಗಿಸಿಟ್ಟ ಶಕ್ತಿಶಾಲಿ ನೆಲಬಾಂಬ್‌ಗೆ ಸಿಲುಕಿದ್ದು, ಒಬ್ಬ ಸೈನಿಕ ಮೃತಪಟ್ಟಿದ್ದಾನೆ. ಮೂವರು ಗಾಯಗೊಂಡಿದ್ದಾರೆ.

ಇದೀಗ ಲಂಕಾ ಸೇನೆ ಆ ಪ್ರದೇಶದಲ್ಲಿ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದೆ.
ಮತ್ತಷ್ಟು
ಭಾರತ-ನೈಜಿರಿಯಾ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ
ಬಂಧನ ನಿಲ್ಲಿಸಲು ಮ್ಯಾನ್ಮಾರ್‌ಗೆ ಆದೇಶ
ಇಂಟರ್‌ನೆಟ್‌ನಲ್ಲಿ ಕಾರ್ ಬಾಂಬ್ ವಿಡಿಯೋ
ನವಾಜ್ ಲಂಡನ್‌ಗೆ ತೆರಳುವ ನಿರ್ಧಾರವಿಲ್ಲ
ವಾಷಿಂಗ್ಟನ್ ಪೋಸ್ಟ್ ವರದಿಗಾರನ ಹತ್ಯೆ
ಭುಟ್ಟೊಗೂ ನೆಲದ ಕಾನೂನು ಅನ್ವಯ