ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಮ್ಯಾನ್ಮಾರ್‌ಗೆ ಜಪಾನ್ ನೆರವು ಮೊಟಕು
ಪ್ರಜಾಪ್ರಭುತ್ವ ಪರ ಪ್ರತಿಭಟನೆಕಾರರ ಮೇಲೆ ಮಿಲಿಟರಿ ಜುಂಟಾ ದಾಳಿಯ ವಿರುದ್ಧ ಕ್ರಮ ಕೈಗೊಂಡಿರುವ ಜಪಾನ್ ಮಂಗಳವಾರ ಮ್ಯಾನ್ಮಾರ್‌ಗೆ ನೆರವು ಮೊಟಕುಗೊಳಿಸಿದೆ. ಮ್ಯಾನ್ಮಾರ್ ವಿರುದ್ಧ ದಿಗ್ಬಂಧನ ಬಲಪಡಿಸಲು ಯುರೋಪ್ ಒಕ್ಕೂಟ ನಿರ್ಧರಿಸಿದ ಮರುದಿನವೇ ಜಪಾನ್ ಈ ಕ್ರಮ ಕೈಗೊಂಡಿದ್ದು, ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಕೂಡ ಅದನ್ನು ಅನುಸರಿಸುವ ಬೆದರಿಕೆ ಒಡ್ಡಿದ್ದಾರೆ.

ಮಿಲಿಟರಿ ಆಳ್ವಿಕೆಯ ಮ್ಯಾನ್ಮಾರ್ ಮೇಲೆ ದಂಡಪ್ರಯೋಗಗಳ ನಡುವೆ,ಮ್ಯಾನ್ಮಾರ್ ಪ್ರಜಾಪ್ರಭುತ್ವದ ಕಡೆ ಹೆಜ್ಜೆ ಹಾಕಿದರೆ ಆರ್ಥಿಕ ನೆರವಿನ ಭರವಸೆಯನ್ನು ಬ್ರಿಟನ್ ಪ್ರಧಾನಮಂತ್ರಿ ಗೋರ್ಡೋನ್ ಬ್ರೌನ್ ನೀಡಿದ್ದಾರೆ. ಥಾಯ್‌ಲೆಂಡ್, ಪ್ರಾದೇಶಿಕ ವೇದಿಕೆಯನ್ನು ಚೀನ,ಭಾರತ ಸೇರಿದಂತೆ ಸ್ಥಾಪಿಸುವ ಪ್ರಸ್ತಾವನೆ ಮಂಡಿಸಿದೆ.

ಬೌದ್ಧ ಬಿಕ್ಕುಗಳ ಪ್ರತಿಭಟನೆಯನ್ನು ಮ್ಯಾನ್ಮಾರ್ ದಮನ ಮಾಡಿದ ಹಿನ್ನೆಲೆಯಲ್ಲಿ 550 ದಶಲಕ್ಷ ಯೆನ್ ನೆರವನ್ನು ಸ್ಥಗಿತಗೊಳಿಸುವುದಾಗಿ ಜಪಾನಿನ ವಿದೇಶಾಂಗ ಸಚಿವ ಮಸಾಹಿಕೊ ಕೊಮುರಾ ತಿಳಿಸಿದ್ದಾರೆ. ಈ ಘಟನೆಯಲ್ಲಿ ಜಪಾನಿನ ವಿಡಿಯೊ ಪತ್ರಕರ್ತ ಸೇರಿದಂತೆ 10 ಮಂದಿ ಮೃತಪಟ್ಟಿದ್ದರು.

ಜಪಾನ್ ಸರ್ಕಾರದ ನಿಲುವು ಏನೆಂದು ನಾವು ತೋರಿಸುವುದು ಅಗತ್ಯವಾಗಿದೆ, ಈ ಹಂತದಲ್ಲಿ ನಾವು ಮಿಲಿಟರಿ ಸರ್ಕಾರಕ್ಕೆ ಬೆಂಬಲಿಸುವ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೊಮುರಾ ಹೇಳಿದರು. ಮ್ಯಾನ್ಮಾರ್‌ಗೆ ಜಪಾನಿನ ಆರೋಗ್ಯ ಕಾರ್ಯಕ್ರಮದ ನೆರವು ಮುಂದುವರಿಯುವುದಿಲ್ಲ ಎಂದು ಅವರು ನುಡಿದರು.

ಯುರೋಪಿಯನ್ ವಿದೇಶಾಂಗ ಸಚಿವರು ಮ್ಯಾನ್ಮಾರ್ ವಿರುದ್ಧ ದಿಗ್ಬಂಧನ ಗಟ್ಟಿಗೊಳಿಸಲು ನಿರ್ಧರಿಸಿ ಸಂಪನ್ಮೂಲ ಸಮೃದ್ಧ ರಾಷ್ಟ್ರದಲ್ಲಿ ಎಲ್ಲ ಹೊಸ ಬಂಡವಾಳಕ್ಕೆ ನಿಷೇಧ ವಿಧಿಸುವುದಾಗಿ ಹೇಳಿತ್ತು.

ಮ್ಯಾನ್ಮಾರ್‌ನ ಮುಖ್ಯ ಮರಮಟ್ಟು, ಲೋಹ, ಹರಳು ಕ್ಷೇತ್ರದ ಮೇಲೆ ದಿಗ್ಬಂಧನದ ಜತೆ ವೀಸಾ ನಿಷೇಧ ಮತ್ತು ಜನರಲ್, ಸರ್ಕಾರಿ ಅಧಿಕಾರಿಗಳು ಮತ್ತು ಸಂಬಂಧಿಗಳ ಆಸ್ತಿ ಮುಟ್ಟುಗೋಲು ಮುಂತಾದ ಕ್ರಮ ಕೈಗೊಳ್ಳಲಿದೆ.ರಾಷ್ಟ್ರಕ್ಕೆ ಸ್ವಾತಂತ್ರ್ಯ ತರದಿದ್ದರೆ ಅವರನ್ನು ಸಂಪೂರ್ಣ ಒಂಟಿಯಾಗಿಸುವುದಾಗಿ ಬರ್ಮಾ ಜನರಲ್‌ಗಳಿಗೆ ಸ್ಪಷ್ಟಪಡಿಸಲು ಅಗಾಧ ಅಂತಾರಾಷ್ಟ್ರೀಯ ಒತ್ತಡ ಹೇರುವ ಅಗತ್ಯವಿದೆ ಎಂದು ಬುಷ್ ಹೇಳಿದ್ದಾರೆ.
ಮತ್ತಷ್ಟು
ಎಲ್ಟಿಟಿಇ ದಾಳಿ: 7 ಸೈನಿಕರ ಹತ್ಯೆ
ಭಾರತ-ನೈಜಿರಿಯಾ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ
ಬಂಧನ ನಿಲ್ಲಿಸಲು ಮ್ಯಾನ್ಮಾರ್‌ಗೆ ಆದೇಶ
ಇಂಟರ್‌ನೆಟ್‌ನಲ್ಲಿ ಕಾರ್ ಬಾಂಬ್ ವಿಡಿಯೋ
ನವಾಜ್ ಲಂಡನ್‌ಗೆ ತೆರಳುವ ನಿರ್ಧಾರವಿಲ್ಲ
ವಾಷಿಂಗ್ಟನ್ ಪೋಸ್ಟ್ ವರದಿಗಾರನ ಹತ್ಯೆ