2008ರ ಆರಂಭದಲ್ಲಿ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಮುಂದಿನ ತಿಂಗಳು ಪಾಕಿಸ್ತಾನವು ಮಧ್ಯಂತರ ಸರಕಾರವನ್ನು ರಚಿಸಲಿದೆ ಎಂದು ಮಾಹಿತಿ ಸಚಿವರು ಮಂಗಳವಾರ ಘೋಷಿಸಿದ್ದಾರೆ.
ರಾಷ್ಟ್ರೀಯ ಸಂಸತ್ತು ನವೆಂಬರ್ 15ರಂದು ವಿಸರ್ಜನೆಗೊಳ್ಳಲಿದೆ ಮತ್ತು ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಂದ ಮಧ್ಯಂತರ ಸರಕಾರವು ರಚನೆಗೊಳ್ಳಲಿದೆ ಎಂದು ಮಹಮ್ಮದ್ ಅಲಿ ದುರಾನಿ ಹೇಳಿದ್ದಾರೆ.
ಮಧ್ಯಂತರ ಸರಕಾರವು ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಂದ ರಚನೆಗೊಳ್ಳಲಿದೆ ಎಂದು ದುರಾನಿ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದು, ಆದರೆ ವಿರೋಧ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ಮಧ್ಯಂತರ ಸರಕಾರವನ್ನು ರಚಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಪ್ರಾಂತೀಯ ಅಸೆಂಬ್ಲಿಗಳು ವಿಸರ್ಜನೆಗೊಳ್ಳಲಿದ್ದು ಮತ್ತು ದೇಶದ ಪ್ರತಿ ನಾಲ್ಕು ಪ್ರಾಂತ್ಯಗಳಿಗೆ ಉಸ್ತುವಾರಿ ಮುಖ್ಯಮಂತ್ರಿಯನ್ನು ನೇಮಕ ಮಾಡಲಾಗುವುದು. ಮುಕ್ತ ಮತ್ತು ನಿಸ್ಪಕ್ಷಪಾತ ಚುನಾವಣೆಯನ್ನು ನಡೆಸುವ ಸಲುವಾಗಿ ಉಸ್ತುವಾರಿ ಸರಕಾರವನ್ನು ರಚಿಸಲು ವಿವಾದಾತೀತ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
|