ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ರಷ್ಯಾದೊಂದಿಗೆ ಮಹತ್ವದ ರಕ್ಷಣಾ ಮಾತುಕತೆ
ಭಾರತದ ರಕ್ಷಣಾ ಸಚಿವ ಎ.ಕೆ.ಆಂಟನಿ ನಾಲ್ಕು ದಿನಗಳ ಭೇಟಿಗಾಗಿ ರಷ್ಯಾಗೆ ಆಗಮಿಸಿದ್ದು, ಉಪಪ್ರಧಾನಿ ಸರ್ಗೆಯಿ ಇವಾನೋ ಅವರನ್ನೊಳಗೊಂಡಂತೆ ಹಿರಿಯ ಸರಕಾರಿ ಅಧಿಕಾರಿಗಳೊಂದಿಗೆ ಸೇನಾ ಸಹಕಾರದ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಭಾರತೀಯ ರಾಯಭಾರಿ ಪ್ರಭಾತ್ ಶುಕ್ಲಾ ಮತ್ತು ರಷ್ಯಾದ ಅಧಿಕಾರಿಗಳು ಆಂಟನಿ ಅವರನ್ನು ಮಾಸ್ಕೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ರಕ್ಷಣಾ ಮಂತ್ರಿಯಾಗಿ ಮೊದಲ ಬಾರಿಗೆ ರಷ್ಯಾಗೆ ಭೇಟಿ ನೀಡಿರುವ ಆಂಟನಿ, ತನ್ನ ರಷ್ಯಾ ಸಹೋದ್ಯೋಗಿ ಅನಾಟಲಿ ಸರ್ಡಿಕೋ ಅವರೊಂದಿಗೆ ಬುಧವಾರ ಮುಖಾಮುಖಿಯಾಗಿ ಮಾತುಕತೆ ನಡೆಸಲಿದ್ದಾರೆ ಮತ್ತು ಸೇನಾ ತಾಂತ್ರಿಕ ಸಹಕಾರದಲ್ಲಿನ ಇಂಡೋ ರಷ್ಯಾ ಅಂತರ್ ಸರಕಾರಿ ಆಯೋಗದ ಏಳನೆ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.

ಡಾಲರ್ ಮೌಲ್ಯದಲ್ಲಿ ಇಳಿಕೆಯಾಗುತ್ತಿರುವುದರಿಂದ ಈ ಮೊದಲು ಭಾರತ ಮತ್ತು ರಷ್ಯಾ ಮಾಡಿಕೊಂಡಿರುವ ರಕ್ಷಣಾ ಸಾಮಗ್ರಿಗಳ ವ್ಯಾಪಾರಿ ಒಪ್ಪಂದವನ್ನು ಪರಿಷ್ಕರಿಸಿ, ನೂತನ ಬೆಲೆಯನ್ನು ನಿಗಧಿ ಮಾಡಬೇಕು ಎಂದು ರಷ್ಯಾ, ಭಾರತವನ್ನು ಒತ್ತಾಯಿಸುತ್ತಿದೆ.

ಐದನೆ ತಲೆಮಾರಿನ ಯುದ್ದ ವಿಮಾನಗಳ ತಯಾರಿಕೆ ಮತ್ತು ಅಭಿವೃದ್ದಿಗೆ ಸಂಬಂಧಿಸಿದಂತೆ ಭಾರತ ಮತ್ತು ರಷ್ಯಾ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಯೋಜನೆ ತಗುಲುವ ವೆಚ್ಚವನ್ನು ಉಭಯ ದೇಶಗಳು ಸಮನಾಗಿ ಹಂಚಿಕೊಳ್ಳುವ ತೀರ್ಮಾನಕ್ಕೆ ಬರಲಾಗಿದೆ.

ಜಂಟಿ ರಕ್ಷಣೆ ಮತ್ತು ಅಧ್ಯಯನ ಮತ್ತು ಅಭಿವೃದ್ಧಿ ಮುಂತಾದ ವಲಯಾಧಾರಿತ ರಕ್ಷಣಾ ಸಹಕಾರದ ನಿರ್ಣಯದ ಕುರಿತು ಶಿಷ್ಟಾಚಾರ ಮಂಡಿಸಲು ಸಹಿ ಹಾಕುವ ಮೂಲಕ ಅಧಿವೇಶನವು ಕೊನೆಗೊಳ್ಳಲಿದೆ.
ಮತ್ತಷ್ಟು
ಭಯೋತ್ಪಾದನೆ ತಡೆಗೆ ವಿಶೇಷ ಘಟಕ
ಪಾಕಿಸ್ತಾನದಲ್ಲಿ ಮಧ್ಯಂತರ ಸರಕಾರ ರಚನೆ
ಮಯನ್ಮಾರ್‌ಗೆ ಹಣಕಾಸಿನ ನೆರವು ಇಲ್ಲ: ಜಪಾನ್
ಬೇನಜೀರ್ ಭುಟ್ಟೊ ಸ್ವಾಗತಕ್ಕೆ ಸಿದ್ಧತೆ
ದಕ್ಷಿಣ ಆಫ್ರಿಕಕ್ಕೆ ಪ್ರಧಾನಿ ಪ್ರಯಾಣ
ಮ್ಯಾನ್ಮಾರ್‌ಗೆ ಜಪಾನ್ ನೆರವು ಮೊಟಕು