ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ:ಭುಟ್ಟೋ
ಎಂಟು ವರ್ಷಕ್ಕೂ ಹೆಚ್ಚಿನ ಗಡೀಪಾರನ್ನು ಕೊನೆಗೊಳಿಸಿ ಶುಕ್ರವಾರ ಪಾಕಿಸ್ತಾನಕ್ಕೆ ಮರಳುತ್ತೇನೆ ಎಂದು ಪಾಕಿಸ್ತಾನ ಮಾಜಿ ಪ್ರಧಾನಿ ಭೆನಜೀರ್ ಭುಟ್ಟೋ ಬುಧವಾರ ಖಚಿತಪಡಿಸಿದ್ದಾರೆ.

ತನ್ನ ಮರಳುವಿಕೆಯನ್ನು ಮುಂದೂಡಬೇಕೆಂಬ ಸರಕಾರದ ಕರೆಗೆ ಗಮನ ಕೊಡುವುದಿಲ್ಲ ಎಂದು ಹೇಳಿರುವ ಭುಟ್ಟೋ, ನಾನು ಪಾಕಿಸ್ತಾನಕ್ಕೆ ಮರಳುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ದುಬೈಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹೇಳಿದರು.

ನನ್ನ ಗಡೀಪಾರು ಕೇವಲ ತಾತ್ಕಾಲಿಕ ಪ್ರತ್ಯೇಕವಾಗಿದ್ದು, ಪಾಕಿಸ್ತಾನವನ್ನು ನನ್ನಿಂದ ಅಥವಾ ನನ್ನನ್ನು ಪಾಕಿಸ್ತಾನದಿಂದ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಭುಟ್ಟೋ ಘೋಷಿಸಿದ್ದಾರೆ.

ನಾನು ಈ ಎಂಟು ವರ್ಷಗಳಲ್ಲಿ ಅತ್ಯಂತ ಕಷ್ಟವನ್ನು ಅನುಭವಿಸಿದ್ದೇನೆ ಮತ್ತು ಈ ಕಷ್ಟಗಳಿಂದ ಅನೇಕ ಪಾಠಗಳನ್ನು ಕಲಿತಿದ್ದೇನೆ. ನನ್ನ ಜೀವವು ಪಾಕಿಸ್ತಾನ ಮತ್ತು ಅಲ್ಲಿಯ ಜನರಿಗಾಗಿ ಮೀಸಲಾಗಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಭುಟ್ಟೋ ಅತ್ಯಂತ ಉದ್ವೇಗದಿಂದ ಹೇಳಿದರು.

ಈ ದೇಶದ ಜನರು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಜೀನವ ಸಾಗಿಸುತ್ತಿದ್ದಾರೆ ಎಂದು ಹೇಳಿರುವ ಭುಟ್ಟೋ, ಪಾಕಿಸ್ತಾನದಲ್ಲಿ ಹಣವು ವ್ಯರ್ಥವಾಗಿ ಹೋಗುತ್ತಿದ್ದು, ನಾನು ಅದನ್ನು ಪಾಕಿಸ್ತಾನದ ಜನತೆಯ ಜೀನವ ಮಟ್ಟವನ್ನು ಅಭಿವೃದ್ಧಿಪಡಿಸಲು ಉಪಯೋಗಿಸುತ್ತೇನೆ ಎಂದು ಭುಟ್ಟೋ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಪ್ರಜಾಪ್ರಭುತ್ವದ ಅಗತ್ಯವಿದೆ . ಕೇವಲ ಪ್ರಜೆಗಳ ಮತಗಳು ಪಾಕಿಸ್ತಾನವನ್ನು ಅರಾಜಕತ್ವದಿಂದ ಉಳಿಸಬಹುದಾಗಿದೆ. ಈ ಮತದಿಂದಾಗಿ ಪ್ರಜೆಗಳು ಪಾಕಿಸ್ತಾನದ ಅದೃಷ್ಟವನ್ನು ಬದಲಾಯಿಸಬಹುದಾಗಿದೆ ಎಂದು ಪಾಕಿಸ್ತಾನದಲ್ಲಿನ ರಾಜಕೀಯ ಪರಿಸ್ಥಿತಿಯ ಕುರಿತು ಭುಟ್ಟೋ ಅಭಿಪ್ರಾಯ ಪಟ್ಟರು.




ಮತ್ತಷ್ಟು
ರಷ್ಯಾದೊಂದಿಗೆ ಮಹತ್ವದ ರಕ್ಷಣಾ ಮಾತುಕತೆ
ಭಯೋತ್ಪಾದನೆ ತಡೆಗೆ ವಿಶೇಷ ಘಟಕ
ಪಾಕಿಸ್ತಾನದಲ್ಲಿ ಮಧ್ಯಂತರ ಸರಕಾರ ರಚನೆ
ಮಯನ್ಮಾರ್‌ಗೆ ಹಣಕಾಸಿನ ನೆರವು ಇಲ್ಲ: ಜಪಾನ್
ಬೇನಜೀರ್ ಭುಟ್ಟೊ ಸ್ವಾಗತಕ್ಕೆ ಸಿದ್ಧತೆ
ದಕ್ಷಿಣ ಆಫ್ರಿಕಕ್ಕೆ ಪ್ರಧಾನಿ ಪ್ರಯಾಣ