ಮ್ಯಾನ್ಮಾರ್ ಪ್ರತಿಪಕ್ಷದ ನಾಯಕಿ ಆಂಗ್ ಸಾನ್ ಸೂಕಿ ಅವರಿಗೆ ಬುಧವಾರ ಗೌರವ ಪೌರತ್ವವನ್ನು ಕೆನಡದ ಕೆಳ ಸಂಸತ್ತು ನೀಡಿದೆ. ಬರ್ಮಾದಲ್ಲಿ ಮಾನವಹಕ್ಕು ರಕ್ಷಣೆ ಮತ್ತು ಪ್ರಜಾಪ್ರಭುತ್ವಕ್ಕಾಗಿ ಸತತ ಹೋರಾಟ ಮಾಡಿದ ಅವರು ಪ್ರಮುಖ ಶಕ್ತಿಯಾಗಿದ್ದಾರೆ ಎಂದು ಪ್ರಧಾನಮಂತ್ರಿ ಸ್ಟೀಫನ್ ಹಾರ್ಪರ್ ಶಾಸಕರಿಗೆ ತಿಳಿಸಿದರು.
ಸೂಕಿ ದಕ್ಷಿಣ ಆಫ್ರಿಕದ ನಾಯಕ ನೆಲ್ಸನ್ ಮಂಡೇಲಾ, ಟೆಬೆಟ್ ಧಾರ್ಮಿಕ ನಾಯಕ ದಲಾಯಿ ಲಾಮ ಮತ್ತು ಎರಡನೆ ಮಹಾಯುದ್ಧದಲ್ಲಿ ಸಾವಿರಾರು ಯಹೂದಿಗಳ ಜೀವರಕ್ಷಣೆ ಮಾಡಿದ ಸ್ವೀಡನ್‌ನ ರಾವಲ್ ವಾಲೆನ್‌ಬರ್ಗ್ ಬಳಿಕ ಕೆನಡದ ಗೌರವ ಪೌರತ್ವವನ್ನು ಸ್ವೀಕರಿಸಿದ ನಾಲ್ಕನೇ ವ್ಯಕ್ತಿಯಾಗಿದ್ದಾರೆ.
ಸೂಕಿಯ ಪ್ರಜಾತಂತ್ರ ರಾಷ್ಟ್ರೀಯ ಲೀಗ್ ಪಕ್ಷವು 1990ರಲ್ಲಿ ಚುನಾವಣೆಯಲ್ಲಿ ಗೆದ್ದಿದ್ದರೂ ಸೇನೆ ಅಧಿಕಾರ ಹಸ್ತಾಂತರಕ್ಕೆ ನಿರಾಕರಿಸಿ ಸೂಕಿಯನ್ನು ಬಂಧನದಲ್ಲಿರಿಸಿತು.
ಸೂಕಿಗೆ ಗೌರವ ಪೌರತ್ವಕ್ಕೆ ಅನುಮೋದನೆಯು ಸೂಕಿ, ಅವರ ಜನರಿಗೆ ಮತ್ತು ವಿಶ್ವಕ್ಕೆ ಬರ್ಮದಲ್ಲಿ ಪತನಹೊಂದಿರುವ ಸಾರ್ವತ್ರಿಕ ಮೌಲ್ಯಗಳಿಗೆ ಕೆನಡ ಬೆಲೆನೀಡುತ್ತದ್ದೆಂದು ರುಜುವಾತು ಮಾಡಿದೆ ಎಂದು ಹಾರ್ಪರ್ ತಿಳಿಸಿದರು,
|