ಟಿಬೆಟ್‌ನ ಧಾರ್ಮಿಕ ಗುರು ದಲಾಯಿ ಲಾಮ ಅವರಿಗೆ ಅಮೆರಿಕ ಉನ್ನತ ಗೌರವ ನೀಡಿರುವುದಕ್ಕೆ ಚೀನಾ ಅಮೆರಿಕದ ವಿರುದ್ಧ ವಾಗ್ದಾಳಿ ಮಾಡಿದೆ. ಈ ಕುರಿತು ತನ್ನ ದೂರು ನೀಡಲು ಅದು ಅಮೆರಿಕದ ರಾಯಭಾರಿಯನ್ನು ಬೀಜಿಂಗ್‌ಗೆ ಕರೆಸಿಕೊಂಡಿದೆ.
ಅಮೆರಿಕದ ಕ್ರಮವು ಚೀನದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪವಾಗಿದ್ದು, ಚೀನಾದ ಜನರ ಭಾವನೆಗಳಿಗೆ ನೋವುಂಟುಮಾಡಿದೆ. ಇದರಿಂದ ಚೀನಾ ಮತ್ತು ಅಮೆರಿಕದ ನಡುವೆ ಸಂಬಂಧಕ್ಕೆ ತೀವ್ರ ಧಕ್ಕೆಯುಂಟುಮಾಡಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಲಿಯು ಚಿಯಾಂಚಾವೊ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1959ರಲ್ಲಿ ಕಮ್ಯೂನಿಸ್ಟ್ ಆಡಳಿತದ ವಿರುದ್ಧ ಕ್ರಾಂತಿ ವಿಫಲಗೊಂಡ ಬಳಿಕ ದಲಾಯಿ ಲಾಮ ಬೌದ್ಧರ ಸ್ವದೇಶಿ ನೆಲವನ್ನು ತ್ಯಜಿಸಿ ಭಾರತದಲ್ಲಿ ವಾಸವಿದ್ದರು. ಅಮೆರಿಕ ಕಾಂಗ್ರೆಸ್ ಸ್ವರ್ಣಪದಕ ಗಳಿಸಿರುವ ಅವರನ್ನು ಚೀನಾ ಪ್ರತ್ಯೇಕತಾವಾದಿ ಎಂಬಂತೆ ಬಿಂಬಿಸಿದೆ.
ಟಿಬೆಟ್‌ನ ಧಾರ್ಮಿಕ ನಾಯಕನನ್ನು ಗೌರವಿಸುವುದರಿಂದ ಬೀಜಿಂಗ್ ಮತ್ತು ವಾಷಿಂಗ್ಟನ್ ನಡುವೆ ಸಂಬಂಧಕ್ಕೆ ಧಕ್ಕೆಯಾಗುತ್ತದೆ ಎಂಬ ಚೀನಾ ಎಚ್ಚರಿಕೆಯ ನಡುವೆಯೂ ಬುಷ್ ದಲಾಯಿ ಲಾಮ ಅವರನ್ನು ಗೌರವಿಸಿದ್ದಾರೆ,
|