ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಕರಾಚಿಯಲ್ಲಿ ಟೊಮೇಟೊ ಕಿಲೊಗೆ 140 ರೂ.
ಜನಪ್ರಿಯ ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಪಾಕಿಸ್ತಾನಕ್ಕೆ ಹಿಂತಿರುಗಿದ್ದಕ್ಕೂ, ಟೊಮೇಟೊ ಬೆಲೆ ಗಗನಕ್ಕೇರಿದ್ದಕ್ಕೂ ಏನೂ ಸಂಬಂಧವಿಲ್ಲ. ಟೊಮೇಟೊ ನಗರದಲ್ಲಿ ಕಿಲೊಗೆ 140 ರೂ. ಏರಿಕೆಯಾಗಿ ತರಕಾರಿ ಬಳಕೆದಾರರಿಗೆ ಕಣ್ಣೀರು ತಂದಿರುವುದಂತೂ ನಿಜ.

ಬೇನಜೀರ್ ಭುಟ್ಟೊ ಕ್ಲಿಫ್ಟನ್‌ನಲ್ಲಿರುವ ತಮ್ಮ ಮನೆಯಲ್ಲಿ ತಂಗಿದ್ದು, ಟೊಮೇಟೊ ದರ ಗಗನಕ್ಕೇರಿದ ಬಗ್ಗೆ ಸದ್ಯದಲ್ಲೇ ಅವರಿಗೆ ದೂರು ಬರುವುದೆಂದು ನಿರೀಕ್ಷಿಸಲಾಗಿದೆ. ಕಳೆದ ವಾರದಿಂದ ಸಗಟು ಮಾರುಕಟ್ಟೆಯಲ್ಲಿ ಟೊಮೇಟೊ ದರ ಕಿಲೊಗೆ 60 ರೂ.ನಿಂದ ಕಿಲೊಗೆ 120 ರೂ.ಗೆ ಜಿಗಿಯಿತು ಎಂದು ಕರಾಚಿ ಸಗಟು ತರಕಾರಿ ಮಾರುಕಟ್ಟೆಯ ವಕ್ತಾರ ಹೇಳಿದ್ದಾರೆಂದು ಡಾನ್ ವರದಿ ಮಾಡಿದೆ.

ಸುಕ್ಕೂರ್ ಮತ್ತು ಬೆಲೂಚಿಸ್ತಾನದಲ್ಲಿ ಮೂರು ತಿಂಗಳ ಕೆಳಗೆ ಬಿದ್ದ ಧಾರಾಕಾರ ಮಳೆಯಿಂದ ಟೊಮೆಟೊ ಬೆಳೆ ಕೊಳೆತುಹೋಯಿತು ಎಂದು ಟೊಮೆಟೊ ಬೆಲೆ ಜಿಗಿತಕ್ಕೆ ನೀಡಿರುವ ವಿವರಣೆ. ಇದರಿಂದಾಗಿ ಪೇಟೆಯಲ್ಲಿ ಟೊಮೆಟೊ ಕೊರತೆ ಹಿಂದೆಂದೂ ಇಲ್ಲದಂತೆ ಕಾಣಿಸಿಕೊಂಡಿದ್ದರಿಂದ ಟೊಮೇಟೊ ಬೆಲೆ ಜಾಸ್ತಿಯಾಯಿತೆಂದು ಹೇಳಲಾಗಿದೆ.
ಮತ್ತಷ್ಟು
ಅಮೆರಿಕದ ವಿರುದ್ಧ ಚೀನಾ ವಾಗ್ದಾಳಿ
ಸೂಕಿಗೆ ಕೆನಡದ ಗೌರವ ಪೌರತ್ವ
ಬೆನಜೀರ್ ಭುಟ್ಟೊ ಸ್ವದೇಶಾಗಮನ
ಚುನಾವಣೆಗೆ ಸ್ಪರ್ಧಿಸಲು ಗೋರ್ ನಕಾರ
ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ:ಭುಟ್ಟೋ
ರಷ್ಯಾದೊಂದಿಗೆ ಮಹತ್ವದ ರಕ್ಷಣಾ ಮಾತುಕತೆ