ಪಾಕಿಸ್ತಾನ ಮಾಜಿ ಪ್ರಧಾನಮಂತ್ರಿ ಭೆನಜಿರ್ ಭುಟ್ಟೋ ಅವರ ರಾಲಿಯ ಸಂದರ್ಭದಲ್ಲಿ ಶುಕ್ರವಾರ ಮುಂಜಾನೆ ಉಂಟಾದ ಎರಡು ಭಾರಿ ಬಾಂಬ್ ಸ್ಫೋಟದಲ್ಲಿ ಕನಿಷ್ಟ 135 ಮಂದಿ ಮೃತಪಟ್ಟಿದ್ದು, 545 ಮಂದಿ ಗಾಯಗೊಂಡಿದ್ದಾರೆ.
ಭುಟ್ಟೋ ಅವರ ಬೆಂಗಾವಲಿನ ಕೆಲವೇ ಅಡಿಗಳ ಅಂತರದಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟಗೊಂಡಿತು. ಆದರೆ ಭುಟ್ಟೋ ಈ ಅಪಾಯದಿಂದ ಪಾರಾಗಿದ್ದಾರೆ.
ಭುಟ್ಟೋ ಅವರು ಸುರಕ್ಷಿತವಾಗಿದ್ದಾರೆ ಮತ್ತು ಪೊಲೀಸ್ ಕಾರಿನಲ್ಲಿ ಅವರ ಮನೆಗೆ ಕಳುಹಿಸಲಾಗಿದೆ ಎಂದು ಪಾಕಿಸ್ತಾನ ಪೀಪಲ್ ಪಾರ್ಟಿ ವಕ್ತಾರ ಫರ್ತಾತುಲ್ಲಾ ಬಾಬರ್ ಸ್ಪಷ್ಟಪಡಿಸಿದ್ದಾರೆ.ಭುಟ್ಟೋ ಸಲಹೆಗಾರ ರೆಹ್ಮಾನ್ ಮಾಲಿಕ್ ಅವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪಾಕಿಸ್ತಾನ ಸ್ಥಾಪಕ ಮಹಮ್ಮದ್ ಅಲಿ ಜಿನ್ನಾ ಅವರ ಸಮಾಧಿಯ ಸ್ಥಳದಲ್ಲಿ ರಾಲಿ ನಡೆಯಲಿತ್ತು. ಈ ಸಮಾಧಿಯತ್ತ ಭುಟ್ಟೋ ತನ್ನ ತಂಡದೊಂದಿಗೆ ತೆರಳುತ್ತಿದ್ದಾಗ ಬಾಂಬ್ ಸ್ಫೋಟಗೊಂಡಿತು.ಸ್ಫೋಟದ ನಂತರ ಈ ರಾಲಿಯನ್ನು ರದ್ದುಪಡಿಸಲಾಯಿತು.
ಕರಾಚಿಯ ಸುತ್ತಮುತ್ತ ರಕ್ಷಣಾ ಪಡೆಗಳು ಪ್ರದೇಶದಲ್ಲಿ ಕಾವಲಿದ್ದು, ಕರಾಚಿಯ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಹಾಗೂ ಎಲ್ಲಾ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ.
|