ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಅಲ್‌ ಖಾಯಿದಾ ಕೈವಾಡ: ಹವಾರ್ಡ್ ಆರೋಪ
165ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಕರಾಚಿ ಬಾಂಬ್ ದಾಳಿಯ ಹಿಂದೆ ಅಲ್‌ ಖಾಯಿದಾ ಕೈವಾಡವಿದೆ ಎಂದು ಆಸ್ಟ್ರೇಲಿಯ ಪ್ರಧಾನಮಂತ್ರಿ ಜಾನ್ ಹವಾರ್ಡ್ ಆರೋಪಿಸಿದ್ದಾರೆ.

ಬೆನಜೀರ್ ಭುಟ್ಟೋ ಭಯೋತ್ಪಾದನೆಯ ವಿರುದ್ಧದ ಅಮೆರಿಕದ ಯುದ್ಧಕ್ಕೆ ಬೆಂಬಲ ನೀಡಿರುವುದರಿಂದ ಅಲ್‌ ಖಾಯಿದಾ ಅವರನ್ನು ಗುರಿಯಾಗಿರಿಸಿರುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.

ಕರಾಚಿಯಲ್ಲಿ ಭುಟ್ಟೋ ದೇಶಕ್ಕೆ ಮರಳಿದ ನಂತರ ನಡೆಯುತ್ತಿದ್ದ ಮೆರವಣಿಗೆ ಸಂದರ್ಭದಲ್ಲಿ ಉಂಟಾದ ಅವಳಿ ಬಾಂಬ್ ಸ್ಫೋಟದಲ್ಲಿ ಭುಟ್ಟೋ ಅಪಾಯದಿಂದ ಪಾರಾಗಿದ್ದಾರೆ.

ಅಮೆರಿಕದೊಂದ ಜತೆಗಿರುವ ಪಾಕಿಸ್ತಾನ ಪರ್ವೇಜ್ ಮುಷರಫ್ ಅವರ ಮೈತ್ರಿಯನ್ನು ಅಲ್‌ ಖಾಯಿದಾ ವಿರೋಧಿಸುತ್ತಿತ್ತು ಎಂದು ಹವಾರ್ಡ್ ಹೇಳಿದರು.

ಭಯೋತ್ಪಾದನೆಯ ವಿರುದ್ಧದ ಅಮೆರಿಕದ ಯುದ್ಧಕ್ಕೆ ಭೆನಜೀರ್ ಭುಟ್ಟೋ ಮತ್ತು ಮುಷರಫ್ ಇಬ್ಬರೂ ತಮ್ಮ ಬೆಂಬಲವನ್ನು ಮುಂದುವರಿಸುವ ಭರವಸೆಯನ್ನು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು
ಬಾಂಬ್ ಸ್ಫೋಟ:ಭುಟ್ಟೋ ಪಾರು
ಆನ್ ಎನ್‌ರೈಟ್‌ಗೆ ಬೂಕರ್ ಪ್ರಶಸ್ತಿ
ಗೋಡೆಯಾಚೆ ವೀಕ್ಷಿಸುವ ಉಪಕರಣ
ಕರಾಚಿಯಲ್ಲಿ ಟೊಮೇಟೊ ಕಿಲೊಗೆ 140 ರೂ.
ಅಮೆರಿಕದ ವಿರುದ್ಧ ಚೀನಾ ವಾಗ್ದಾಳಿ
ಸೂಕಿಗೆ ಕೆನಡದ ಗೌರವ ಪೌರತ್ವ