ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಬುಷ್‌ರ ತೃತೀಯ ಮಹಾಯುದ್ಧ ಕೇವಲ ಕಲ್ಪನೆ
ಒಂದುವೇಳೆ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಿದಲ್ಲಿ ತೃತೀಯ ಮಹಾಯುದ್ಧವನ್ನು ನಡೆಸಲಿದೆ ಎಂಬ ಬುಷ್ ಹೇಳಿಕೆಯ ಬಗ್ಗೆ, ಬುಷ್ ಕೇವಲ ಕಾಲ್ಪನಿಕ ವಿಷಯವನ್ನು ಸೃಷ್ಟಿಸುತ್ತಿದ್ದಾರೆ ಎಂದು ಶ್ವೇತಭವನವು ತಿಳಿಸಿದೆ.

ಅಧ್ಯಕ್ಷರು ಯಾವುದೇ ಯುದ್ಧದ ಯೋಜನೆಯನ್ನು ಮಾಡಿಲ್ಲ ಮತ್ತು ಯಾವುದೇ ಪ್ರಕಟಣೆಯನ್ನು ಮಾಡಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ದಾನಾ ಪೆರಿನೋ ಹೇಳಿದ್ದು, ಬುಷ್ ಯುದ್ದದ ಕುರಿತು ಇರುವ ತಮ್ಮ ಆತಂಕವನ್ನು ಹೊರಗೆಡಹಿದ್ದಾರೆ ಅಷ್ಟೇ, ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಮುಂದುವರಿಸಲು ಅನುವು ಮಾಡಿಕೊಡಬೇಕು ಎಂಬ ವಿಷಯದ ಬಗ್ಗೆ ನಾವು ನಂಬುವುದಿಲ್ಲ ಅಲ್ಲದೇ ಯಾವುದೇ ಅಂತರಾಷ್ಟ್ರೀಯ ಸಮುದಾಯವು ನಂಬುವುದಿಲ್ಲ ಎಂದು ಅವರು ಹೇಳಿದರು.

ಒಂದುವೇಳೆ ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಿದರೆ, ಅತ್ಯಂತ ಅಪಾಯ ಪರಿಸ್ಥಿತಿ ಉಂಟಾಗುವ ಸಂಭವವಿರಬಹುದು ಇದರಿಂದಾಗಿ ತೃತೀಯ ಮಹಾಯುದ್ಧ ಸಂಭವಿಸಬಹುದು ಎಂಬುದು ಬುಷ್ ಅವರ ಕಲ್ಪನೆ ಮಾತ್ರವೇ ಆಗಿದ್ದು, ಅವರು ಅದನ್ನು ಪ್ರಕಟಿಸಿಲ್ಲ ಎಂದು ಅವರು ಹೇಳಿದರು.

ತೆಹ್ರಾನ್ ನಿರಾಕರಿಸಿದ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ಇರಾನ್ ರಹಸ್ಯವಾಗಿ ಪ್ರಯತ್ನಿಸುತ್ತಿದೆ ಎಂದು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಆರೋಪಿಸಿವೆ.

ಒಂದು ವೇಳೆ ಮೂರನೇ ಮಹಾಯುದ್ಧವನ್ನು ತಪ್ಪಿಸಬೇಕಾದರೆ, ಪರಮಾಣು ಶಸ್ತ್ರಾಸ್ತ್ರವನ್ನು ಪಡೆಯುವ ಇರಾನ್‌ನ ಆಸಕ್ತಿಯನ್ನು ತಡೆಯಬೇಕು ಎಂದು ಜನತೆಗೆ ಹೇಳಿರುವುದಾಗಿ ಬುಷ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಅಂತರಾಷ್ಟ್ರೀಯ ಮಟ್ಟದ ಶಾಂತಿ ಮತ್ತು ಭದ್ರತೆಯನ್ನು ಈ ನಿಯಮವು ನಾಶಗೊಳಿಸುತ್ತದೆ ಎಂದು ಇರಾನ್ ಬುಷ್ ಟೀಕೆಯನ್ನು ದೂಷಿಸಿದೆ ಎಂಬುದಾಗಿ ಇರಾನಿನ ವಿದೇಶಾಂಗ ಸಚಿವಾಲಯದ ವಕ್ತಾರ ಮಹಮ್ಮದ್ ಅಲಿ ಹುಸೇನಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಮತ್ತಷ್ಟು
ಅಲ್‌ ಖಾಯಿದಾ ಕೈವಾಡ: ಹವಾರ್ಡ್ ಆರೋಪ
ಬಾಂಬ್ ಸ್ಫೋಟ:ಭುಟ್ಟೋ ಪಾರು
ಆನ್ ಎನ್‌ರೈಟ್‌ಗೆ ಬೂಕರ್ ಪ್ರಶಸ್ತಿ
ಗೋಡೆಯಾಚೆ ವೀಕ್ಷಿಸುವ ಉಪಕರಣ
ಕರಾಚಿಯಲ್ಲಿ ಟೊಮೇಟೊ ಕಿಲೊಗೆ 140 ರೂ.
ಅಮೆರಿಕದ ವಿರುದ್ಧ ಚೀನಾ ವಾಗ್ದಾಳಿ